ತುಮಕೂರು: ‘ಆರ್.ಆರ್.ನಗರ ಉಪಚುನಾವಣೆಯಲ್ಲಿ ಮತದಾರರು ನನ್ನ ಸೊಸೆ ಕುಸುಮಾ ಅವರಿಗೆ ಮತ ನೀಡಬೇಕು’ ಎಂದು ಕುಸುಮಾ ಅವರ ಅತ್ತೆ ಹಾಗೂ ದಿ.ಡಿ.ಕೆ.ರವಿ ಅವರ ತಾಯಿ ಗೌರಮ್ಮ ಮನವಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಹೊಟ್ಟೆಯ ಉರಿಯ ಕಾರಣಕ್ಕೆ ಈ ಹಿಂದೆ ಏನೇನೊ ಮಾತನಾಡಿದ್ದೆ. ಆದರೆ ಆಕೆ ಕಣ್ಣೀರು ಹಾಕುವುದನ್ನು ನನಗೆ ನೋಡಲು ಸಾಧ್ಯವಾಗುತ್ತಿಲ್ಲ. ಸಂಕಟವಾಗುತ್ತಿದೆ. ನನ್ನ ಮಗಳಂತೆ ಅವಳ ಜತೆ ನಾಲ್ಕೈದು ವರ್ಷ ಬದುಕಿದ್ದೇನೆ. ದೇವರ ದಯೆಯಿಂದ ಆಕೆ ಗೆಲ್ಲಬೇಕು’ ಎಂದು ಕೋರಿದ್ದಾರೆ.

‘ಆರ್.ಆರ್.ನಗರ ಕ್ಷೇತ್ರದ ಜನರು ಆಕೆಗೆ ಅಕ್ಕ ತಂಗಿಯರ ರೀತಿ, ಅಣ್ಣ ತಮ್ಮಂದಿರಂತೆ ಬೆಂಬಲ ನೀಡಬೇಕು. ಕುಸುಮಾ ಗೆದ್ದರೆ ಅವಳ ಜತೆ ಸೇರಿ ನಾನೂ ನಿಮ್ಮ ಕೆಲಸ ಮಾಡಿಕೊಡುತ್ತೇನೆ. ಡಿ.ಕೆ.ರವಿ ಮಾಡಿದ ರೀತಿಯಲ್ಲಿಯೇ ಆಕೆಯೂ ಕೆಲಸ ಮಾಡುವಳು‘ ಎಂದಿದ್ದಾರೆ.

ಈ ಹಿಂದೆ ಉಪ ಚುನಾವಣೆಯಲ್ಲಿ ಡಿ.ಕೆ.ರವಿ ಫೋಟೊ ಬಳಸಿದರೆ ಬೆಂಕಿ ಹಚ್ಚುತ್ತೇನೆ ಎಂದು ಗೌರಮ್ಮ, ಸೊಸೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.