ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಹಕ್ಕುಗಳ ಜಾಗೃತಿಗಾಗಿ ವಾಕಥಾನ್

Published 4 ಡಿಸೆಂಬರ್ 2023, 16:12 IST
Last Updated 4 ಡಿಸೆಂಬರ್ 2023, 16:12 IST
ಅಕ್ಷರ ಗಾತ್ರ

ಯಲಹಂಕ: ಮಾತೃ ಅಂಧರ ಮತ್ತು ಇತರೆ ವಿಶೇಷ ಚೇತನರ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಅಂಗವಿಕಲರ ದಿನ ಪ್ರಯುಕ್ತ ಅಂಗವಿಕಲರ ಹಕ್ಕುಗಳ ಜಾಗೃತಿ ನಡಿಗೆ ‘ವಾಕಥಾನ್’ ಹಮ್ಮಿಕೊಳ್ಳಲಾಯಿತು.

ಸಿಂಗನಾಯಕನಹಳ್ಳಿ ರೈತರಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಅಂಗವಿಕಲ ಮಕ್ಕಳ ಬಗ್ಗೆ ಕೇವಲ ಅನುಕಂಪದ ಮಾತುಗಳನ್ನಾಡದೆ ಕೈಲಾದ ಸಹಾಯ ಮಾಡುವ ಮೂಲಕ ಅವರ ಅಭಿವೃದ್ಧಿಗೆ ಸಹಕರಿಸಬೇಕು. ಅವರ ಹಕ್ಕುಗಳ ರಕ್ಷಣೆಗೆ ಸಮಾಜ ಹಾಗೂ ಸರ್ಕಾರ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ಉಪನಗರದ ವಿವೇಕಾನಂದ ಉದ್ಯಾನದಿಂದ ಆರಂಭವಾದ ಜಾಗೃತಿ ಜಾಥಾ, ಉಪನಗರದ ಪ್ರಮುಖ ಬೀದಿಗಳ ಮೂಲಕ ಮದರ್‌ ಡೈರಿ ವೃತ್ತದವರೆಗೂ ಸಾಗಿತು. ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು. ಮಾತೃ ಶಿಕ್ಷಣ ಸಂಸ್ಥೆಯ ಶಿಕ್ಷಕಿಯರು ಬೀದಿನಾಟಕ ಪ್ರದರ್ಶಿಸಿದರು.

ವ್ಯವಸ್ಥಾಪಕ ಟ್ರಸ್ಟಿ ಗುಬ್ಬಿ ಆರ್‌. ಮುಕ್ತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT