ಬೆಂಗಳೂರು: ಬಾಕಿ ಇರುವ ಅಸಲು ಪಾವತಿಸಿದರೆ ಬಡ್ಡಿ ಹಾಗೂ ದಂಡವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಜಲಮಂಡಳಿ ಘೋಷಿಸಿರುವ ಯೋಜನೆ ಇದೇ 16ರಿಂದ ಜಾರಿಯಾಗಲಿದ್ದು, ಮಾರ್ಚ್ 31ರವರೆಗೂ ಬಾಕಿ ಪಾವತಿಸಲು ಅವಕಾಶ ಇದೆ.

ಜಲಮಂಡಳಿಯು ಈಗಾಗಲೇ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದು, ನೀರಿನ ಬಾಕಿ ಉಳಿಸಿಕೊಂಡಿರುವವರ ಮನೆ, ಕಚೇರಿ ಇಲ್ಲವೇ ವಾಣಿಜ್ಯ ಕಟ್ಟಡಗಳಿಗೆ ಮಂಡಳಿಯ ಸಿಬ್ಬಂದಿ ಸದ್ಯದಲ್ಲೇ ನೋಟಿಸ್ ಜಾರಿ ಮಾಡಲಿದ್ದಾರೆ. ಅಲ್ಲದೇ ಈ ಯೋಜನೆಯ ಪ್ರಯೋಜನದ ಬಗ್ಗೆ ತಿಳಿಸಿಕೊಡಲಿದ್ದಾರೆ.

ಜಲಮಂಡಳಿ ವ್ಯಾಪ್ತಿಯಲ್ಲಿ ಗೃಹ, ವಾಣಿಜ್ಯ, ಅರೆ ವಾಣಿಜ್ಯ, ಸರ್ಕಾರಿ ಹಾಗೂ ರಕ್ಷಣಾ ವಿಭಾಗ ಸೇರಿ 11 ಲಕ್ಷ ಸಂಪರ್ಕಗಳಿವೆ. ಇದರಲ್ಲಿ 4.50 ಲಕ್ಷದಿಂದ 5 ಲಕ್ಷ ಮಂದಿ ಪ್ರತಿ ತಿಂಗಳು ಬಿಲ್ ಪಾವತಿ ಮಾಡುತ್ತಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ 6.22 ಲಕ್ಷ ಸಂಪರ್ಕಗಳಿಂದ ಸುಮಾರು ₹850 ಕೋಟಿ ಬಾಕಿ ಉಳಿದಿದೆ. ಇದರಲ್ಲಿ ಅಸಲು ಪ್ರಮಾಣ ಸುಮಾರು ₹550 ಕೋಟಿ. ಬಡ್ಡಿಯೇ ಸುಮಾರು ₹300 ಕೋಟಿಯಷ್ಟಿದೆ.

ಬಾಕಿ ತುಂಬುವುದು ಹೇಗೆ?

ನಿಗದಿಪಡಿಸಿರುವ ಅವಧಿಯಲ್ಲಿ ಪೂರ್ಣ ಅಸಲು ಪಾವತಿಸಿದರೆ, ತಂತ್ರಾಂಶದಲ್ಲಿ ಬಡ್ಡಿ ಮತ್ತು ದಂಡದ ಮೊತ್ತ ಸ್ವಯಂಚಾಲಿತವಾಗಿ ಮನ್ನಾ ಆಗಿ ಶೂನ್ಯ ಖಾತೆಯಾಗಿ ತೋರಿಸಲಿದೆ. ಆ ನಂತರ ತಿಂಗಳ ಬಿಲ್ ಮಾತ್ರ ಬರಲಿದೆ.

ಜಲಮಂಡಳಿಯ ಬಿಲ್ ರೀಡರ್ ಆಗಲಿ, ಸಿಬ್ಬಂದಿಯಾಗಲಿ ಅಸಲು ಮೊತ್ತ ಪಡೆಯುವಂತಿಲ್ಲ. ಮಧ್ಯವರ್ತಿಗಳಿಗೂ ಅವಕಾಶವಿಲ್ಲ. ನೋಟಿಸ್ನಲ್ಲಿಯೇ ಒಟ್ಟು ಬಾಕಿ ಪ್ರಮಾಣ ನಮೂದಾಗಿರಲಿದೆ. ಬಾಕಿ ಪಾವತಿಸಿದರೆ ಎಷ್ಟು ಬಡ್ಡಿ ಮನ್ನಾ ಆಗಲಿದೆ ಎನ್ನುವುದು ಕೂಡ ಅಲ್ಲೇ ತೋರಿಸುವುದರಿಂದ ಕಚೇರಿಗೆ ಅಲೆಯುವ ಪ್ರಮೇಯ ಇರುವುದಿಲ್ಲ. ಈಗಾಗಲೇ ಗ್ರಾಹಕರು ಪಾವತಿ ಮಾಡುತ್ತಿರುವಂತೆಯೇ ಜಲಮಂಡಳಿ ಕಚೇರಿಗಳು, ಬೆಂಗಳೂರು ಒನ್ ಇಲ್ಲವೇ ಆನ್ಲೈನ್ ಮೂಲಕ ಪಾವತಿಸಲು ಅವಕಾಶವಿದೆ.

‘ಗ್ರಾಹಕರು ನೇರವಾಗಿ ಜಲಮಂಡಳಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ ಆ್ಯಪ್ ಒಂದನ್ನು ರೂಪಿಸಲಾಗುತ್ತಿದೆ’ ಎಂದು ಮಂಡಳಿಯ ಪ್ರಧಾನ ಎಂಜಿನಿಯರ್ ಬಿ.ಎಸ್. ದಲಾಯತ್ ತಿಳಿಸಿದರು.

ಯೋಜನೆ ಜಾರಿ ಏಕೆ?

ಹೈದರಾಬಾದ್ನಲ್ಲಿ ಜಲಮಂಡಳಿ ಎರಡು ಬಾರಿ ಜಾರಿ ಮಾಡಿದ್ದ ಇದೇ ಮಾದರಿಯ ಯೋಜನೆಯಿಂದ ನಿರೀಕ್ಷಿಸಿದ್ದ ಆದಾಯ ಬಂದಿದ್ದರಿಂದ ಅಂತಹದ್ದೇ ಮಾದರಿಯನ್ನು ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

‘ಜಲಮಂಡಳಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸಂಪನ್ಮೂಲದ ಅಗತ್ಯ ಇರುವುದರಿಂದ ಇದು ಜಾರಿಯಾಗುತ್ತಿದೆ’ ಎಂದು ಮಂಡಳಿಯ ಆರ್ಥಿಕ ಸಲಹೆಗಾರ ಸುಬ್ಬರಾಮಪ್ಪ ತಿಳಿಸಿದರು.

ಬಾಕಿ ಇರುವ ನೀರಿನ ಬಿಲ್ಲಿನ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ ಬಡ್ಡಿ ಮತ್ತು ದಂಡ ಶೇ 100ರಷ್ಟು ಮನ್ನಾ ಮಾಡುವ ಯೋಜನೆ ಈ ತಿಂಗಳೇ ಜಾರಿಯಾಗಲಿದೆ. ಒಂದೆರಡು ದಿನದಲ್ಲಿ ಮಾರ್ಗಸೂಚಿ ಪ್ರಕಟಿಸುತ್ತೇವೆ
ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷ ಬೆಂಗಳೂರು ಜಲಮಂಡಳಿ

ಪೊಲೀಸ್ ಇಲಾಖೆಯದ್ದೇ ಅಧಿಕ

ಸರ್ಕಾರಿ ಇಲಾಖೆಗಳಲ್ಲಿ ಪೊಲೀಸ್ ಇಲಾಖೆಯ ಬಾಕಿಯೇ ಹೆಚ್ಚಿದೆ. ಇದರಲ್ಲಿ ವಸತಿ ಸಮುಚ್ಚಯ ಹಾಗೂ ಕಚೇರಿಗಳ ಎರಡು ಖಾತೆಗಳಿವೆ. ವಸತಿ ಸಮುಚ್ಚಯದ 113 ಸಂಪರ್ಕದಿಂದ ₹42 ಕೋಟಿ ಅಸಲು ₹27 ಕೋಟಿ ಬಡ್ಡಿ ಕಚೇರಿಗಳ 14 ಸಂಪರ್ಕದಿಂದ ₹3.30 ಕೋಟಿ ಅಸಲು ₹3.09 ಬಡ್ಡಿ ಬರಬೇಕಾಗಿದೆ. ಜಿಬಿಎ (ಹಿಂದಿನ ಬಿಬಿಎಂಪಿ) ಅಸಲಿಗಿಂತ ಬಡ್ಡಿಯನ್ನೇ ಹೆಚ್ಚು ಉಳಿಸಿಕೊಂಡಿದೆ. ₹7.88 ಕೋಟಿ ಅಸಲು ಇದ್ದರೆ ಬಡ್ಡಿ ಪ್ರಮಾಣ ₹17.38 ಕೋಟಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.