ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶೀಯ ಪಾಲುದಾರರಾಗಲು ಎಚ್‌ಎಎಲ್‌ ಒತ್ತು ನೀಡಿಲ್ಲ: ಆರ್‌. ಮಾಧವನ್‌

Last Updated 7 ನವೆಂಬರ್ 2018, 13:06 IST
ಅಕ್ಷರ ಗಾತ್ರ

ಬೆಂಗಳೂರು: ‘ಯುದ್ಧವಿಮಾನತಯಾರಿಕಾ ಕಂಪನಿಯ ದೇಶೀಯ ಪಾಲುದಾರರಾಗಲು (ಆಫ್‌ಸೆಟ್‌ ಷರತ್ತು ಅಥವಾ ಒಪ್ಪಂದ ಮಾಡಿಕೊಂಡ ರಾಷ್ಟ್ರದ ಕಂಪೆನಿಯಲ್ಲಿ ಹೂಡಿಕೆ ಮಾಡಬೇಕಿರುವ ನಿರ್ದಿಷ್ಟ ಪ್ರಮಾಣ) ಎಚ್‌ಎಎಲ್‌ ಒತ್ತು ನೀಡಿಲ್ಲ’ ಎಂದುಸಂಸ್ಥೆಯ ನೂತನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಆರ್‌. ಮಾಧವನ್‌ ಸ್ಪಷ್ಟಪಡಿಸಿದರು.

ರಫೇಲ್‌ ಒಪ್ಪಂದ ವಿಚಾರದಲ್ಲಿ ಎಚ್‌ಎಎಲ್‌ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಆ ಬಗ್ಗೆ ಮಾತನಾಡಿದ ಅವರು, ‘ದೇಶೀಯ ಪಾಲುದಾರರಾಗುವುದಕ್ಕಿಂತ, ಯುದ್ಧವಿಮಾನ ಸಿದ್ಧಪಡಿಸಲುಸಮಗ್ರ ತಂತ್ರಜ್ಞಾನ ವರ್ಗಾಯಿಸುವ ಸಂಸ್ಥೆಯೊಂದಿಗೆ ಪಾಲುದಾರರಾಗುವ ಆಸಕ್ತಿ ಎಚ್‌ಎಎಲ್‌ಗಿದೆ’ ಎಂದರು.

‘ಯುದ್ಧವಿಮಾನ, ಹೆಲಿಕಾಪ್ಟರ್ ಮತ್ತು ಅದರ ಬಿಡಿ ಭಾಗಗಳನ್ನು ಸಿದ್ಧಪಡಿಸುವುದು ಹಾಗೂ ಅವುಗಳ ದುರಸ್ತಿಯ ಬಗ್ಗೆಯೇ ಎಚ್‌ಎಎಲ್‌ ಗಮನ ಕೇಂದ್ರೀಕರಿಸಿದೆಯೇ ಹೊರತು ದೇಶೀಯ ಪಾಲುದಾರರಾಗುವುರಲ್ಲಿಅಲ್ಲ’ ಎಂದು ಹೇಳಿದರು.

‘ತಂತ್ರಜ್ಞಾನವನ್ನೇ ವರ್ಗಾಯಿಸಿಕೊಂಡುಯುದ್ಧವಿಮಾನಗಳನ್ನು ಸಿದ್ಧಪಡಿಸುವುದು ಹಾಗೂ ದೇಶೀಯ ಪಾಲುದಾರರಾಗುವುದಕ್ಕೂ ಸಾಕಷ್ಟು ಭಿನ್ನತೆ ಇದೆ. ವಿವಿಧ ಯೋಜನೆಗಳಲ್ಲಿ ದೇಶೀಯ ಪಾಲುದಾರನಾಗಿಎಚ್‌ಎಎಲ್‌ ಕಾರ್ಯನಿರ್ವಹಿಸಿದೆ. ಆದರೆ, ಅದು ಯಾವುದೇ ಪ್ರಮುಖ ವ್ಯವಹಾರದ ಭಾಗವಾಗಿಲ್ಲ’ ಎಂದು ವಿವರಿಸಿದರು.

ಡಸಾಲ್ಟ್‌ ಕಂಪನಿ ಜತೆಗೆ ರಫೇಲ್‌ ಯುದ್ಧ ವಿಮಾನ ಖರೀದಿಸಲು ಮಾಡಿಕೊಂಡ ಒಪ್ಪಂದದಲ್ಲಿ ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನೇದೇಶೀ ಪಾಲುದಾರನಾಗಿ ಸೇರಿಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಹೇಳಿತ್ತು ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ರಿಲಯನ್ಸ್‌ ಸಮೂಹ ಈ ಆರೋಪವನ್ನು ತಳ್ಳಿ ಹಾಕಿದೆ.

ಈ ಹಿಂದೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಧವನ್‌, ‘ರಫೇಲ್‌ ಒಪ್ಪಂದದಿಂದ ಎಚ್‌ಎಎಲ್‌ ಈಗ ಸಂಪೂರ್ಣ ಹೊರಗಿದೆ. ಆದರೆ, ಹಿಂದೆ ರಫೇಲ್‌ ಒಪ್ಪಂದದಲ್ಲಿ ಭಾಗಿಯಾಗಿತ್ತು. ಸರ್ಕಾರ ನೇರವಾಗಿ ಅದನ್ನು ಖರೀದಿಸಿತ್ತು ಹಾಗಾಗಿ ಅದರ ಬೆಲೆ ಮತ್ತು ನಿಯಮಗಳ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ’ ಎಂದಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT