ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹8 ಕೋಟಿ ಮೌಲ್ಯದ ‘ತಿಮಿಂಗಿಲ ವಾಂತಿ’ ಮಾರಾಟ ಯತ್ನ

Last Updated 9 ಜೂನ್ 2021, 19:10 IST
ಅಕ್ಷರ ಗಾತ್ರ

ಬೆಂಗಳೂರು: ಕೋಟ್ಯಂತರ ರೂಪಾಯಿ ಬೆಲೆಬಾಳುವ ‘ತಿಮಿಂಗಿಲದ ವಾಂತಿ'ಯನ್ನು (ಅಂಬೆರ್ಗ್ರಿಸ್) ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ತಜ್ಮುಲ್ ಪಾಷಾ (54), ಸಲೀಂ ಪಾಷಾ (48), ರಫೀ ಉಲ್ಲಾ ಶರೀಫ್ (45), ನಾಸಿರ್ ಪಾಷಾ (34) ಬಂಧಿತರು.

‘ಆರೋಪಿಗಳು ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲಕ್ಷ್ಮೀಪತಿ ಗಾರ್ಡನ್‍ನ ತೆಂಗಿನ ತೋಟದ ಬಳಿ ಈ ನಿಷೇಧಿತ ವಸ್ತುವನ್ನು ಇಟ್ಟುಕೊಂಡು ಮಾರಾಟ ಮಾಡಲು ಮುಂದಾಗಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಯಿತು. ಆರೋಪಿಗಳ ಬಳಿ ಇದ್ದ ₹8 ಕೋಟಿ ಬೆಲೆಬಾಳುವ 6.7 ಕೆ.ಜಿ ತೂಕದ ತಿಮಿಂಗಿಲ ವಾಂತಿಯನ್ನು ಜಪ್ತಿ ಮಾಡಲಾಯಿತು’ ಎಂದು ಪೊಲೀಸರು ತಿಳಿಸಿದರು.

‘ತಿಮಿಂಗಿಲ ವಾಂತಿಯು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನಿಷೇಧಿತ ವಸ್ತು. ಇದನ್ನುಸುಗಂಧ ದ್ರವ್ಯ ಹಾಗೂ ಔಷಧ ತಯಾರಿಯಲ್ಲೂ ಹೆಚ್ಚಾಗಿ ಬಳಸುತ್ತಾರೆ. ಈ ವಸ್ತುವಿಗೆಅರಬ್, ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹1.5 ಕೋಟಿಯಷ್ಟು ಬೆಲೆಯಿದೆ’ ಎಂದು ವಿವರಿಸಿದರು.

‘ಆರೋಪಿಗಳಿಗೆ ಈ ವಸ್ತು ಎಲ್ಲಿಂದ ಲಭ್ಯವಾಯಿತು ಹಾಗೂ ಯಾರಿಗೆ ಮಾರಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಐಪಿಸಿಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT