ಬೆಂಗಳೂರು: ರಸ್ತೆಯಲ್ಲಿ ವ್ಹೀಲಿ ನಡೆಸಿ ತೊಂದರೆ ಉಂಟು ಮಾಡುತ್ತಿದ್ದ ಯುವಕರ ವರ್ತನೆಯಿಂದ ಸಿಟ್ಟಿಗೆದ್ದ ವಾಹನ ಸವಾರರು ಎರಡು ದ್ವಿಚಕ್ರ ವಾಹನಗಳನ್ನು ಮೇಲ್ಸೇತುವೆಯಿಂದ ಕೆಳಗೆ ಎಸೆದಿದ್ದಾರೆ.
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಅಡಕಮಾರನಹಳ್ಳಿಯ ಮೇಲ್ಸೇತುವೆ ಬಳಿ ಈ ಘಟನೆ ನಡೆದಿದೆ. ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದೆ.
ಹೆದ್ದಾರಿಯಲ್ಲಿ ವ್ಹೀಲಿ ಮಾಡುತ್ತಿದ್ದ ಯುವಕನೊಬ್ಬ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಇತರೆ ಸವಾರರು ಆತನ ಮತ್ತು ವ್ಹೀಲಿ ಮಾಡುತ್ತಿದ್ದ ಮತ್ತೊಬ್ಬ ಯುವಕನ ದ್ವಿಚಕ್ರ ವಾಹನವನ್ನೂ ಕೆಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರವಷ್ಟೇ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ವ್ಹೀಲಿ ಮಾಡುತ್ತಿದ್ದ 44 ಯುವಕರನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.
Public fury erupts in Nelamangala as angry locals toss two scooters off a flyover after spotting riders doing dangerous wheelie stunts. This #Bawal in #Bengaluru shows just how fed up people are with reckless behavior on the roads! #Karnatakapic.twitter.com/cd39xKBzbe