ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ವೈಟ್‌ ಟಾಪಿಂಗ್‌ ಕಾಮಗಾರಿ: ಸಂಚಾರ ಮಾರ್ಗ ಬದಲು

Published 9 ಆಗಸ್ಟ್ 2024, 23:48 IST
Last Updated 9 ಆಗಸ್ಟ್ 2024, 23:48 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಟಿ. ನಗರ ಮುಖ್ಯರಸ್ತೆಯಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದ್ದು ರವೀಂದ್ರನಾಥ್ ಟ್ಯಾಗೋರ್‌ ವೃತ್ತದಿಂದ (ಗುಂಡೂರಾವ್ ಜಂಕ್ಷನ್) ಆರ್‌ಟಿ ನಗರ ಮುಖ್ಯರಸ್ತೆಗೆ ಸಂಚಾರ ನಿರ್ಬಂಧಿ ಸಲಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.‌

lಜಯಮಹಲ್ ಮುಖ್ಯರಸ್ತೆಯಿಂದ ಆರ್‌.ಟಿ. ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಚಲಿಸುವ ಬಿಎಂಟಿಸಿ ಬಸ್‌ಗಳು ಸಿಕ್ಯೂಎಎಲ್ ಕ್ರಾಸ್ ಮೂಲಕ ಮೇಕ್ರಿ ವೃತ್ತದಲ್ಲಿ ಬಲಕ್ಕೆ ತಿರುವು ಪಡೆದುಕೊಳ್ಳ ಬೇಕು. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಸಿಬಿಐ ಕೆಳಸೇತುವೆ ಬಳಿ ಮತ್ತೆ ಬಲಕ್ಕೆ ತಿರುವು ಪಡೆದು ಆರ್‌.ಟಿ. ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಸಂಚರಿಸಬಹುದಾಗಿದೆ.

lಜಯಮಹಲ್ ಮುಖ್ಯರಸ್ತೆಯಿಂದ ಕಾವಲ್‌ ಬೈರಸಂದ್ರ ಹಾಗೂ ಸುಲ್ತಾನ್‌ಪಾಳ್ಯ ಕಡೆಗೆ ಚಲಿಸುವ ವಾಹನಗಳು ಸಿಕ್ಯೂಎಎಲ್ ಕ್ರಾಸ್ ಬಳಿ ಬಲಕ್ಕೆ ತಿರುವು ಪಡೆದುಕೊಂಡು ವಾಟರ್‌ಟ್ಯಾಂಕ್‌ ಜಂಕ್ಷನ್ ಕಡೆಯಿಂದ ದೇವೇಗೌಡ ರಸ್ತೆಯ(ಪಿ.ಆರ್.ಟಿ.ಸಿ) ಮೂಲಕ ದಿಣ್ಣೂರು ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದುಕೊಂಡು ಸುಲ್ತಾನ್‌ಪಾಳ್ಯ ಹಾಗೂ ಕಾವಲ್‌ಬೈರಸಂದ್ರ ಕಡೆಗೆ ಚಲಿಸಬಹುದು.

lವಾಟರ್‌ಟ್ಯಾಂಕ್ ಜಂಕ್ಷನ್, ರಾಧಾಕೃಷ್ಣ ಚಿತ್ರಮಂದಿರ ಹಾಗೂ ಮಠದಹಳ್ಳಿ ಕಡೆಯಿಂದ ಆರ್‌.ಟಿ. ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಚಲಿಸುವ ಇತರೆ ವಾಹನಗಳು ರವೀಂದ್ರನಾಥ್ ಟ್ಯಾಗೋರ್ ವೃತ್ತದಿಂದ (ಗುಂಡೂರಾವ್ ಜಂಕ್ಷನ್) ಬಳಿ ಎಡ ತಿರುವು ಪಡೆದು ತರಳಬಾಳು ರಸ್ತೆ ಮೂಲಕ ಬಳ್ಳಾರಿ ಮುಖ್ಯರಸ್ತೆಗೆ ಬಂದು ಎಡ ತಿರುವು ಪಡೆದು ಕೊಳ್ಳಬೇಕು. ನಂತರ, ಮೇಕ್ರಿ ವೃತ್ತದ ಬಳಿ ಯು–ಟರ್ನ್ ಪಡೆದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಸಿಬಿಐ ಕೆಳಸೇತುವೆ ಬಳಿ ಬಲಕ್ಕೆ ತಿರುವು ಪಡೆದುಕೊಂಡು ಆರ್‌ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಸಂಚರಿಸಬಹುದು ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT