ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಮಾರುಕಟ್ಟೆ ಸಿಂಗೇನಹಳ್ಳಿಗೆ ಸ್ಥಳಾಂತರ ?

Last Updated 28 ಮಾರ್ಚ್ 2020, 20:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದೊಳಗಿನ ಸಗಟು ಮಾರುಕಟ್ಟೆಗಳನ್ನು ಸೋಮವಾರದಿಂದ ಸಿಂಗೇನಹಳ್ಳಿಗೆ ಸ್ಥಳಾಂತರಿಸಲು ಬಿಬಿಎಂಪಿ ಮುಂದಾಗಿದೆ.

ಈ ಕುರಿತು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಪಾಲಿಕೆ ವಿಶೇಷ ಆಯುಕ್ತರು (ಮಾರುಕಟ್ಟೆ) ಎಸ್.ಜಿ. ರವೀಂದ್ರ,ಎ.ಪಿ.ಎಂ.ಸಿ ನಿರ್ದೇಶಕ, ಕರಿಗೌಡ ಹಾಗೂ ಜಂಟಿ ನಿರ್ದೇಶಕ ನಾಗೇಶ್, ಮತ್ತಿತರ ಅಧಿಕಾರಿಗಳು ಕಲಾಸಿಪಾಳ್ಯ ಸಗಟು ಮಾರುಕಟ್ಟೆ ಸಂಘದ ಪ್ರತಿನಿಧಿಗಳ ಜೊತೆ ಶನಿವಾರ ಸಭೆ ನಡೆಸಿದರು. ಸದ್ಯದ ಪರಿಸ್ಥಿತಿಯಲ್ಲಿ ತುರ್ತಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಸಗಟು ಮಾರುಕಟ್ಟೆ ಕಲಾಸಿಪಾಳ್ಯದಂತಹ ನಗರದ ಮಧ್ಯ ಭಾಗದಲ್ಲಿ ವ್ಯವಹಾರ ನಡೆಸುವುದು ಸೂಕ್ತವಲ್ಲ. ಸಣ್ಣಪುಟ್ಟ ವ್ಯಾಪಾರಸ್ಥರು ಹಾಗೂ ನಾಗರಿಕರು ಈ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಬರುತ್ತಾರೆ. ಇದರಿಂದ ಸಗಟು ಮಾರುಕಟ್ಟೆ ಸ್ಥಳವು ಕಿಷ್ಕಿಂದೆಯಂತಾಗಿದೆ. ಕೇವಲ ಒಂದು ಎಕರೆ ಪ್ರದೇಶದಲ್ಲಿ ಅಧಿಕೃತವಾಗಿ ಸುಮಾರು 423 ಸಗಟು ಮಳಿಗೆಗಳು, ಅನಧಿಕೃತವಾಗಿ ರಸ್ತೆಗಳಲ್ಲಿ ನೊರಾರು ವ್ಯಾಪಾರಸ್ಥರು ವ್ಯಾಪಾರ ಮಾಡುವುದರಿಂದ ಜನಸಂದಣಿಯನ್ನು ತಡೆಯುವುದು ಕಷ್ಟ ಸಾಧ್ಯ. ಅದ್ದರಿಂದ ಈ ಕೂಡಲೇ ಸಗಟು ಮಾರುಕಟ್ಟೆ ಬಂದ್ ಮಾಡುವುದು ಅನಿವಾರ್ಯವಾಗಿದೆ ಎಂದು ಸಂಘದ ಪದಾಧಿಕಾರಿಗಳಿಗೆ ಅನಿಲ್‌ ಕುಮಾರ್‌ ಹೇಳಿದರು.

ಸಂಘದ ಪದಾಧಿಕಾರಿಗಳು, ‘ಸದ್ಯ ಬೇರೆ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಕಷ್ಟ ಸಾಧ್ಯ. ರಸ್ತೆ ಗಳಲ್ಲಿ ಖಾಲಿ, ಖಾಲಿ ಇರುವುದರಿಂದ (ಜೆ.ಸಿ ರಸ್ತೆ ಇನ್ನಿತರ ಪ್ರಮುಖ) ಅವಕಾಶ ಮಾಡಿಕೊಟ್ಟರೆ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುತ್ತೇವೆ’ ಎಂದು ತಿಳಿಸಿದರು. ಆದರೆ ಇದಕ್ಕೆ ಒಪ್ಪದ ಪಾಲಿಕೆ ಆಯುಕ್ತರು, ‘ಇದು ನಗರದ ಮಧ್ಯ ಭಾಗದಲ್ಲಿರುವುದರಿಂದ, ಸಗಟು ವ್ಯಾಪಾರ ಕಷ್ಟಸಾಧ್ಯ. ಈ ಕೊಡಲೆ ಸಗಟು ವ್ಯಾಪಾರವನ್ನು ಸ್ಥಳಾಂತರಿಸಬೇಕು. ಇದಕ್ಕಾಗಿ ಆನೇಕಲ್ ಹತ್ತಿರ ಸಿಂಗೇನಹಳ್ಳಿ ಅಗ್ರಹಾರದ ಬಳಿ ಸುಮಾರು 43 ಎಕರೆ ಪ್ರದೇಶದ ವಿಸ್ತೀರ್ಣವುಳ್ಳ ಸ್ಥಳವನ್ನು ಗುರುತಿಸಲಾಗಿದೆ. ನಾಳೆ ಒಳಗಾಗಿ ತಮಗೆ ಸ್ಥಳ ವನ್ನು ನಿಗದಿಪಡಿಸಿ ತರ್ತು ಸೌಲಭ್ಯಗಳನ್ನು, ವಿದ್ಯುತ್, ನೀರು, ವಾಹನ ನಿಲುಗಡೆ ಇನ್ನಿತರೆ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

‘ಈ ಕೊಡಲೇ ವ್ಯಾಪಾರ ಸ್ಥಳವನ್ನು ಬದಲಾಯಿಸಿ, ಸೋಮವಾರದಿಂದ ವ್ಯಾಪಾರ ವಹಿವಾಟು ನಡೆಸಿ’ ಎಂದು ಸೂಚಿಸಿದರು.

ಸ್ಥಳ ಪರಿಶೀಲನೆಗಾಗಿ ಮಾನ್ಯ ಕಾರ್ಯದರ್ಶಿ ಹಾಗೂ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ಆನೇಕಲ್ ನ ಸಿಂಗೇನಹಳ್ಳಿ ಪ್ರದೇಶಕ್ಕೆ ತೆರಳಿದರು.

ಯಶವಂತಪುರ: ಆಲೂಗಡ್ಡೆ, ಈರುಳ್ಳಿ ಮಾರಾಟ ನಿಷೇಧ
ಯಶವಂತಪುರ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿನ ಆಲೂಗಡ್ಡೆ, ಈರುಳ್ಳಿ ಮತ್ತು ಬೆಳ್ಳುಳ್ಳಿ ವಹಿವಾಟು ನಡೆಸುವುದನ್ನು ನಿಷೇಧಿಸಿ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಕರೀಗೌಡ ಸುತ್ತೋಲೆ ಹೊರಡಿಸಿದ್ದಾರೆ.

ಯಶವಂತಪುರ ಪ್ರಾಂಗಣದ ಬದಲಿಗೆ ದಾಸನಪುರ ಉಪಮಾರುಕಟ್ಟೆಯಲ್ಲಿ ಮಾ.30ರಿಂದ ಏ.30ರವರೆಗೆ ವಹಿವಾಟು ನಡೆಸಲು ಸೂಚಿಸಲಾಗಿದೆ. ‘ಏಕ ಪಕ್ಷೀಯವಾದ ಈ ನಿರ್ಧಾರವನ್ನು ಅನುಷ್ಠಾನ ಮಾಡುವುದು ಕಷ್ಟ. ಬಗ್ಗೆ ಚರ್ಚಿಸಲು ಭಾನುವಾರ ಬೆಳಿಗ್ಗೆ ವರ್ತಕರ ಸಭೆ ಕರೆಯಲಾಗಿದೆ’ ಎಂದು ಸಂಘದ ಕಾರ್ಯದರ್ಶಿ ಉದಯಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT