ಮಂಗಳವಾರ, ನವೆಂಬರ್ 12, 2019
20 °C

ಬಿಜೆಪಿಯಿಂದ ಹಣ ಪಡೆದ ಆರೋಪ: ಧರ್ಮಸ್ಥಳದಲ್ಲಿ ಪ್ರಮಾಣ, ಬೈರತಿ ಸವಾಲು

Published:
Updated:
Prajavani

ಕೆ.ಆರ್.ಪುರ: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿಯಿಂದ ಹಣ ಪಡೆದಿದ್ದೇನೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನೇತ್ರಾವತಿಯಲ್ಲಿ ಸ್ನಾನ ಮಾಡಿ ಹಸಿಬಟ್ಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಮುಂದೆ ನಿಂತು ಪ್ರಮಾಣ ಮಾಡುತ್ತೇನೆ. ಅಪಪ್ರಚಾರ ಮಾಡುವವರು ತಾಕತ್ತು ಇದ್ದರೆ ಪ್ರಮಾಣ ಮಾಡಲಿ’ ಎಂದು ಅನರ್ಹ ಶಾಸಕ ಬೈರತಿ ಬಸವರಾಜ್‌ ಸವಾಲು ಎಸೆದರು.

ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ಅಡಿಯಲ್ಲಿ ಬಸವನಪುರ ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಾನು ಯಾರ ಹಂಗಿನಲ್ಲಿ ಇಲ್ಲ. ಬೈರತಿ ಬಸವರಾಜ್ ಬಿಜೆಪಿಯಿಂದ ಹಣ ತೆಗೆದುಕೊಂಡಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಬಿಜೆಪಿಯಿಂದ ಹಣ ತೆಗೆದುಕೊಂಡಿದ್ದರೆ ದೇವರು ಶಿಕ್ಷೆ ನೀಡಲಿ’ ಎಂದರು.

ಪ್ರತಿಕ್ರಿಯಿಸಿ (+)