ಗುರುವಾರ , ಅಕ್ಟೋಬರ್ 29, 2020
19 °C

ರೈತರ ಹೋರಾಟಕ್ಕೆ ಸಾಹಿತಿಗಳ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂಸುಧಾರಣೆ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ರೈತರು, ಕಾರ್ಮಿಕರು ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಸಾಹಿತಿಗಳು ಹಾಗೂ ಕಲಾವಿದರು ಬೆಂಬಲ ಸೂಚಿಸಿದ್ದಾರೆ.

ಕೆ. ಮರುಳಸಿದ್ದಪ್ಪ, ಪುರುಷೋತ್ತಮ ಬಿಳಿಮಲೆ, ವಿಜಯಾ, ವಸುಂಧರಾ ಭೂಪತಿ, ಬಿ. ಸುರೇಶ್, ಚಿದಂಬರ ರಾವ್ ಜಂಬೆ, ಶೂದ್ರ ಶ್ರೀನಿವಾಸ್, ಕೆ. ನೀಲಾ, ಪ್ರೊ.ಎಲ್.ಎನ್. ಮುಕುಂದರಾಜ್, ಪ್ರೊ.ಎಚ್.ವಿ. ವೇಣುಗೋಪಾಲ್, ಬಿ.ಆರ್. ಮಂಜುನಾಥ್, ಸುರೇಂದ್ರನಾಥ್, ನಟರಾಜ ಹೊನ್ನವಳ್ಳಿ, ಯಶವಂತ್ ಮರೋಳಿ, ಯೋಗೇಶ್ ಮಾಸ್ಟರ್, ವೆಂಕಟೇಶ್ ಪ್ರಸಾದ್, ಜಿ.ಪಿ. ಬಸವರಾಜ್, ಎಂ.ಜಿ. ವೆಂಕಟೇಶ್, ನಾಗೇಶ್ ಅರಳಕುಪ್ಪೆ ಹಾಗೂ ಸುರೇಂದ್ರ ರಾವ್ ಅವರು ಪ್ರತಿಭಟನೆಗೆ ಸಹಮತ ಸೂಚಿಸಿದ್ದಾರೆ.

‘ಕೇಂದ್ರ ಸರ್ಕಾರವು ಕೋವಿಡ್ ಪಿಡುಗಿನ ಸಂಕಷ್ಟದಲ್ಲಿ ಕೃಷಿ, ಪರಿಸರ ಮತ್ತು ಕಾರ್ಮಿಕ ಸಂಬಂಧಿ ಕಾನೂನುಗಳಿಗೆ ತಿದ್ದುಪಡಿ ತಂದು, ಸಂಸತ್ತಿನಲ್ಲಿ ತನಗಿರುವ ಬಹುಮತದಿಂದ ಶಾಸನಗಳನ್ನು ರೂಪಿಸುತ್ತಿದೆ. ಇದು ಕಾರ್ಪೊರೇಟ್ ಕಂಪನಿಗಳ ಸಂ‍ಪತ್ತನ್ನು ಇನ್ನಷ್ಟು ಹೆಚ್ಚಿಸುವ ಹುನ್ನಾರವಾಗಿದೆ. ಇದನ್ನು ಮನಗಂಡ ರೈತರು ಹಾಗೂ ಕಾರ್ಮಿಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಜನತೆಯ ಮೇಲೆ ದಯೆ ದಾಕ್ಷಿಣ್ಯವಿಲ್ಲದೆ ದಮನಕಾರಿ ನೀತಿಗಳನ್ನು ಶಾಸನಗಳಾಗಿ ರೂಪಿಸುತ್ತಿವೆ’ ಎಂದು ತಿಳಿಸಿದ್ದಾರೆ. 

‘ರೈತರು ಹಾಗೂ ಕಾರ್ಮಿಕರ ಹೋರಾಟಗಳನ್ನು ಬೆಂಬಲಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಜಾಪ್ರಭುತ್ವ ವಿರೋಧಿ ತೀರ್ಮಾನಗಳನ್ನು ವಿರೋಧಿಸುತ್ತೇವೆ’ ಎಂದು ಪ್ರಕಟಣೆಯಲ್ಲಿ ಪ್ರತಿಪಾದಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು