ಬೆಂಗಳೂರು: 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಅದರ ವಿಡಿಯೊ ಚಿತ್ರೀಕರಣ ಮಾಡಿಟ್ಟುಕೊಂಡಿದ್ದ ಪ್ರಕರಣದಲ್ಲಿ ಎಂಟು ಮಂದಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಬಾಲಕಿ ಮೇಲೆ 2021ರ ಅಕ್ಟೋಬರ್‌ನಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆದಿದೆ. ಬಾಲಕಿಯ ಪೋಷಕರು ಏಪ್ರಿಲ್ 5ರಂದು ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

'ಬಾಲಕಿ ಸ್ನೇಹಿತೆಯ ಸಹೋದರ ಹಾಗೂ ಆತನ ಸ್ನೇಹಿತರು ಸೇರಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳೆಲ್ಲರೂ ಬಾಲಕಿಗೆ ಪರಿಚಿತರು. ಬಾಲಕಿ ಗುರುತು ಬಹಿರಂಗವಾಗಬಾರದೆಂಬ ಕಾರಣಕ್ಕೆ ಆರೋಪಿಗಳ ಹೆಸರು ಗೌಪ್ಯವಾಗಿ ಇರಿಸಲಾಗಿದೆ’ ಎಂದೂ ಹೇಳಿದರು.

ಸ್ನೇಹಿತೆ ಮನೆಗೆ ಹೋಗಿದ್ದಾಗ ಪರಿಚಯ: ‘ಬಾಲಕಿಯು ಆಗಾಗ ಸ್ನೇಹಿತೆಯ ಮನೆಗೆ ಹೋಗಿ ಬರುತ್ತಿದ್ದಳು. ಅದೇ ವೇಳೆಯೇ ಸ್ನೇಹಿತೆಯ ಸಹೋದರನ ಪರಿಚಯವಾಗಿತ್ತು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಾಲಕಿ ಮೇಲೆ ಆರೋಪಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅದು ಗೊತ್ತಾಗುತ್ತಿದ್ದಂತೆ ಆರೋಪಿಯ ಸ್ನೇಹಿತರು, ಬಾಲಕಿಯನ್ನು ಬೆದರಿಸಿ ದೌರ್ಜನ್ಯ ನಡೆಸಿದ್ದರು. ಅದೇ ದೃಶ್ಯಗಳನ್ನು ಇಬ್ಬರು ಆರೋಪಿಗಳು, ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದರು’ ಎಂದೂ ಮೂಲಗಳು ಹೇಳಿವೆ.

‘ಬಂಧಿತರ ಪೈಕಿ ಇಬ್ಬರು ಬಾಲಕರು. ಉಳಿದವರು 18 ವರ್ಷದಿಂದ 36 ವರ್ಷದ ಒಳಗಿನವರು. ಕೆಲವರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಉಳಿದವರು ಅದಕ್ಕೆ ಸಹಕಾರ ನೀಡಿದ್ದಾರೆ' ಎಂದೂ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.