ಆಟೊ ಚಾಲಕನ ಮಾಹಿತಿ ಕೇಳಿದ ಪೊಲೀಸರು
ಆಟೊ ಚಾಲಕನ ಕಾರ್ಯವನ್ನು ಪ್ರಶಂಸಿಸಿರುವ ಬೆಂಗಳೂರು ಪೊಲೀಸರು ಆತನ ಬಗ್ಗೆ ಮಾಹಿತಿ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ಒಂದು ಸಣ್ಣ ಸಂದೇಶ, ಒಂದು ದೊಡ್ಡ ಸೂಚಕ. ಬೆಂಗಳೂರಿಗರೇ ಆತನನ್ನು ತಲುಪಲು ಸಹಕರಿಸಿ. ಆತನ ಬಗ್ಗೆ ಏನಾದರು ಮಾಹಿತಿ ಸಿಕ್ಕಲ್ಲಿ ನಮ್ಮನ್ನು ಸಂಪರ್ಕಿಸಿ’ ಎಂದು ಹೇಳಿದ್ದಾರೆ.