ಬುಧವಾರ, ಜುಲೈ 28, 2021
26 °C

'ಜೂಮ್’ ಆ್ಯಪ್ ಹ್ಯಾಕ್; ಪ್ರಾಂಶುಪಾಲರಿಂದ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಳಸುತ್ತಿದ್ದ ‘ಜೂಮ್’ ಆನ್‌ಲೈನ್ ಕ್ಲಾಸ್ ಆ್ಯಪ್ ಹ್ಯಾಕ್‌ ಆಗಿರುವ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ಶಾಲೆ ಪ್ರಾಂಶುಪಾಲರು ಸಿಐಡಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

‘ಆ್ಯಪ್ ಹ್ಯಾಕ್ ಹಾಕಿರುವ ಹಾಗೂ ಹ್ಯಾಕ್ ಮಾಡಿದ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಹೆಬ್ಬಾಳ ಸಮೀಪದ ಶಾಲೆಯೊಂದರ ಪ್ರಾಂಶುಪಾಲರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆನ್‌ಲೈನ್ ಪಾಠಕ್ಕೆಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಮೇ 21ರಂದು ಆ್ಯಪ್‌ನಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಅದೇ ವೇಳೆ ಆ್ಯಪ್ ಹ್ಯಾಕ್‌ಮಾಡಿದ್ದ ಆರೋಪಿ, ಅವಾಚ್ಯ ಶಬ್ಧಗಳಿಂದ ಶಿಕ್ಷಕರನ್ನು ನಿಂದಿಸಿದ್ದ. ವಿದ್ಯಾರ್ಥಿ ಇರಬಹುದೆಂದು ಶಿಕ್ಷಕರು ವಿಚಾರಿಸಿದ್ದರು. ಆದರೆ, ಶಾಲೆಗೆ ಸಂಬಂಧವಿಲ್ಲದ ವ್ಯಕ್ತಿ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.