ಬೆಂಗಳೂರು: ‘ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗದೆ ಕಿಡ್ನಿ ಶಸ್ತ್ರಚಿಕಿತ್ಸೆಯಿಂದ ದೂರವುಳಿದ 25 ರೋಗಿಗಳಿಗೆ ರೀಗಲ್ ಆಸ್ಪತ್ರೆಯಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗುವುದು’ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ವಿ. ಸೂರಿ ರಾಜು ತಿಳಿಸಿದರು.

‘ಮಾರ್ಚ್ 10ರ ವಿಶ್ವ ಕಿಡ್ನಿ ದಿನಾಚರಣೆಗೂ ಮುನ್ನವೇ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ನಡೆಸಲಾಗುವುದು’ ಎಂದರು.

‘ದೇಶದ ಜನಸಂಖ್ಯೆಯ ಶೇ 5ರಿಂದ 7ರಷ್ಟು ಜನ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಬಡವರು ಹಣಕಾಸು ತೊಂದರೆಯಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.

ಅಂಥವರು ಆಸ್ಪತ್ರೆ ಮೊಬೈಲ್: 7760598121 ಅನ್ನು ಸಂಪರ್ಕಿಸಬಹುದು. ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಗುರುತಿಸಿ ತಪಾಸಣೆ ಹಾಗು ಕೌಟುಂಬಿಕ ಹಿನ್ನೆಲೆ ಪರಿಶೀಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.