ಬೆಂಗಳೂರು:  ಮಲ್ಲೇಶ್ವರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಗಾಯಗೊಂಡು 51 ದಿನಗಳಿಂದ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಲೀಷಾ (17) ಆಸ್ಪತ್ರೆಯಿಂದ ಗುರುವಾರ ಮನೆಗೆ ತೆರಳಲಿದ್ದಾರೆ.

`ಮಗಳು ಸಂಪೂರ್ಣ ಗುಣಮುಖಳಾಗಲು ಒಂದು ವರ್ಷ ಚಿಕಿತ್ಸೆ ಮುಂದುವರಿಸಬೇಕಿದೆ. ಕುಟುಂಬಕ್ಕೆ ಈ ಆರ್ಥಿಕ ಚೈತನ್ಯ ಇಲ್ಲ' ಎಂದು ತಂದೆ ದೊರೆಸ್ವಾಮಿ ಅಳಲು ತೋಡಿಕೊಂಡಿದ್ದಾರೆ.

ಏಪ್ರಿಲ್ 17ರಂದು ಬಾಂಬ್ ಸ್ಫೋಟ ಸಂಭವಿಸಿತ್ತು. ಪಿಯುಸಿ ವಿದ್ಯಾರ್ಥಿನಿಯರಾದ ಲೀಷಾ ಮತ್ತು ರಕ್ಷಿತಾ ಸೇರಿದಂತೆ 19 ಮಂದಿ ಗಾಯಗೊಂಡಿದ್ದರು. ಲೀಷಾ ಅವರ ಎಡಗಾಲಿಗೆ ತೀವ್ರ ಪೆಟ್ಟಾಗಿತ್ತು. ಆಸ್ಪತ್ರೆಯಲ್ಲೇ ಆಕೆ ಪರೀಕ್ಷೆ ಬರೆದಿದ್ದಳು.

`ಈಗಾಗಲೇ ಕಾಲಿಗೆ ಸಂಬಂಧಿಸಿದಂತೆ ಎರಡು ಶಸ್ತ್ರಚಿಕಿತ್ಸೆಗಳು ನಡೆದಿವೆ. ಕಾಲಿನ ಮೂಳೆ ಸರಿಯಾಗಿ ಕೂಡಿಕೊಂಡು ಎಂದಿನಂತೆ ಕಾರ್ಯನಿರ್ವಹಿಸಲು ಒಂದು ವರ್ಷ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ವಾರಕ್ಕೊಮ್ಮೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ತೆರಳುವಂತೆ ವೈದ್ಯರು ತಿಳಿಸಿದ್ದಾರೆ. ನನಗೆ ಮಗಳ ಆರೋಗ್ಯ ಮತ್ತು ವಿದ್ಯಾಭ್ಯಾಸದ ಬಗ್ಗೆ ತೀವ್ರ ವ್ಯಥೆಯಾಗಿದೆ' ಎಂದು ದೊರೆಸ್ವಾಮಿ ನೋವು ತೋಡಿಕೊಂಡರು.

`ಲೀಷಾ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದ್ದು, ಗುಣಮುಖವಾಗಲು ಎಲ್ಲ ರೀತಿಯ ನೆರವು ನೀಡಲಿದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ. ಗೃಹ ಸಚಿವ ಕೆ.ಜೆ.ಜಾರ್ಜ್ ಈಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ನೆರವು ಯಾಚಿಸಿದ್ದೆವು. ಆದರೆ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ' ಎಂದು ಬೇಸರ ತೋಡಿಕೊಂಡರು.

`ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಆರಂಭದಲ್ಲಿ ಕೆಲವು ದಾನಿಗಳು ನೆರವು ನೀಡಲು ಮುಂದಾಗಿದ್ದರು. ಆದರೆ, ಚಿಕಿತ್ಸಾ ವೆಚ್ಚ ಸಣ್ಣ ಪ್ರಮಾಣದ್ದು ಆಗಬಹುದು ಎಂಬ ಕಾರಣಕ್ಕೆ ನೆರವು ಪಡೆಯಲು ಹಿಂಜರಿದಿದ್ದೆವು. ವೈದ್ಯಕೀಯ ವೆಚ್ಚ ಹೊರತುಪಡಿಸಿ ದಿನಕ್ಕೆ ರೂ 1,000 ಖರ್ಚು ಆಗುತ್ತಿದೆ. ಪ್ರತಿನಿತ್ಯ ಈ ಮೊತ್ತವನ್ನು ಭರಿಸುವ ಶಕ್ತಿ ಇಲ್ಲ. ಮಗಳು ಆಸ್ಪತ್ರೆ ಸೇರಿದ ಬಳಿಕ ಕೂಲಿಗೂ ಹೋಗಿಲ್ಲ' ಎಂದು ಅವರು ತಿಳಿಸಿದರು.

`ಮಗಳು ಏರೋನಾಟಿಕಲ್ ಎಂಜಿನಿಯರಿಂಗ್ ಓದಬೇಕೆಂದು ಆಸೆಪಟ್ಟಿದ್ದಳು. ಚಿಕಿತ್ಸೆಯಿಂದಾಗಿ ಅವಳ ಓದು ಹಾಳಾಗಿದೆ. ಪಿಯುಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಅನುತ್ತೀರ್ಣಳಾಗಿದ್ದಾಳೆ. ಪೂರಕ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾಳೆ. ಗಾಯಗೊಂಡ ಕಾರಣ ಆಕೆಗೆ ಪರೀಕ್ಷೆಗೆ ಸಜ್ಜಾಗಲು ಸಾಧ್ಯವಾಗಿರಲಿಲ್ಲ. ಆಕೆಯ ಕನಸೆಲ್ಲ ನುಚ್ಚುನೂರು ಆಗಿದೆ. ಕುಟುಂಬಕ್ಕೆ ದಿಕ್ಕೇ ತೋಚದಂತೆ ಆಗಿದೆ' ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.