ಬೆಂಗಳೂರು: ಗಾರೆ ಕೆಲಸ ಮಾಡುವ ನಾಯಂಡಹಳ್ಳಿ ನಿವಾಸಿ ಪ್ರಭು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಭು ಅವರ ಬಳಿ ಬ್ಯಾಂಕ್ ಖಾತೆಯಾಗಲಿ, ಪಾನ್ ಕಾರ್ಡಾಗಲಿ ಇಲ್ಲ. ಆದರೆ ಕೈಯಲ್ಲಿ ₨ 30 ಸಾವಿರ ನಗದು ಹಾಗೂ ಅಂದಾಜು ₨ 60 ಸಾವಿರ ಮೌಲ್ಯದ 20 ಗ್ರಾಂ ಚಿನ್ನ ಇದೆ ಎಂದು ನಾಮಪತ್ರದೊಂದಿಗೆ ನೀಡಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಪಡೆದಿರುವ ಇವರ ಬಳಿ ಒಟ್ಟು 90 ಸಾವಿರ ಮೌಲ್ಯದ ಚರಾಸ್ತಿ ಇದೆ. ಇದನ್ನು ಹೊರತು ಪಡಿಸಿ ಮನೆ, ಖಾಲಿ ನಿವೇಶನ, ವಾಹನ ಸೇರಿದಂತೆ ಬೇರೆ ಯಾವ ಆಸ್ತಿಯೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.