ಬೆಂಗಳೂರು: ಜೆ.ಸಿ.ನಗರದ ಪ್ಯಾರಾಚೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್‌ನಲ್ಲಿ (ಪಿಆರ್‌ಟಿಸಿ) ತರಬೇತಿ ಪಡೆಯುತ್ತಿದ್ದ ಯೋಧ ಕಾಂತ ಭೂಪೇಂದ್ರ (21) ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಜರಾತ್‌ನ ಭೂಪೇಂದ್ರ, ನಾಲ್ಕು ತಿಂಗಳ ಹಿಂದಷ್ಟೇ ತರಬೇತಿ ಪಡೆಯಲು ಕೇಂದ್ರಕ್ಕೆ ಬಂದಿದ್ದರು. ಸಹೋದ್ಯೋಗಿಗಳ ಜತೆ ವಸತಿಗೃಹದಲ್ಲಿ ವಾಸವಿದ್ದರು. ಕೊಠಡಿಯಿಂದ ರಾತ್ರಿ ಹೊರಬಂದಿದ್ದ ಅವರು, ಆವರಣದಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.

ಬೆಳಗ್ಗೆ 6 ಗಂಟೆಗೆ ತರಬೇತಿಗೆ ಭೂಪೇಂದ್ರ ಹೋಗಿರಲಿಲ್ಲ. ಆತನಿಗಾಗಿ ಸಹೋದ್ಯೋಗಿಗಳು ಹುಡುಕಾಟ ನಡೆಸಿದ್ದರು. ಅದೇ ವೇಳೆ ಮರದಲ್ಲಿ ಶವ ನೇತಾಡುತ್ತಿರುವುದನ್ನು ಕಂಡಿದ್ದರು. ನಂತರವೇ ಠಾಣೆಗೆ ಮಾಹಿತಿ ನೀಡಿದ್ದರು. ಕೇಂದ್ರದ ಹಿರಿಯ ಅಧಿಕಾರಿ ಅರ್ಜುನ್ ದೂರು ನೀಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.