ಬೆಂಗಳೂರು: ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿರುವ ಎಂಜಿನಿಯರುಗಳಿಗೆ ವರ್ಗಾವಣೆ ಸಂದರ್ಭದಲ್ಲಿ ಅವರು ಯಾರಿಂದ ಅಧಿಕಾರ ಸ್ವೀಕರಿಸಿದ್ದಾರೆ ಎನ್ನುವುದು ನೆನಪಿಲ್ಲ...!

-ಇದು ಹೈಕೋರ್ಟ್ಗೆ ಬಿಬಿಎಂಪಿಯ ಇಬ್ಬರು ಎಂಜಿನಿಯರ್ಗಳು ಮಂಗಳವಾರ ನೀಡಿರುವ ಹೇಳಿಕೆ. ಕೋರ್ಟ್ ಆದೇಶ ಉಲ್ಲಂಘನೆ ಆರೋಪ ಹೊತ್ತ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ಹೆಸರು ಹೇಳಿ ಎಂದಾಗ, `ನಮಗೆ ನೆನಪಿಲ್ಲ~ ಎಂದು ಈ ಎಂಜಿನಿಯರುಗಳು ಕೋರ್ಟ್ಗೆ ತಿಳಿಸಿದರು.

ಈ ಪೈಕಿ, ಒಬ್ಬರು 15 ದಿನಗಳ ಹಿಂದೆ `ಚಾರ್ಜ್~ ತೆಗೆದುಕೊಂಡ ಸಹಾಯಕ ಎಂಜಿನಿಯರ್ ಎಚ್.ಬಿ.ನಾಗರಾಜ ಹಾಗೂ ಇನ್ನೊಬ್ಬರು ಜೂನ್ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿರುವ ಕಾರ್ಯನಿರ್ವಾಹಕ ಎಂಜಿನಿಯರ್ ಉದಯಕುಮಾರ್.

ಇದನ್ನು `ಜಾಣ ಮರೆವು~ ಎಂದು ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ, ಈ ಸಂಬಂಧ ಪಾಲಿಕೆಯ ಆಯುಕ್ತರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಿದರು. `ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿರುವ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಏಕೆ ದಾಖಲು ಮಾಡಬಾರದು ಎಂಬ ಬಗ್ಗೆ ಇದೇ 10ರ ಒಳಗೆ ಸಮಜಾಯಿಷಿ ನೀಡಿ~ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.

`ಮಲಬಾರ್ ಮುಸ್ಲಿಂ ಸಂಘಟನೆ~ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ಲಾಲ್ಬಾಗ್ (ಕೆ.ಎಸ್.ಗಾರ್ಡನ್) 4ನೇ ಅಡ್ಡರಸ್ತೆಯಲ್ಲಿನ ಜಮೀನಿನ ವಿವಾದ ಇದಾಗಿದೆ. ಈ ಜಮೀನು ತಮಗೆ ಸೇರಿದ್ದು, ಅಲ್ಲಿ ರಜಿಯಾ ಬೇಗಂ ಎನ್ನುವವರು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವುದು ಅವರ ಆರೋಪ.

`ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರಾರ್ಥನಾ ಮಂದಿರ ಅಲ್ಲಿದೆ. ಈ ಕಟ್ಟಡ ನಿರ್ಮಾಣದಿಂದ ಭಕ್ತಾದಿಗಳಿಗೆ ತೊಂದರೆ ಆಗುತ್ತಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಆಗುತ್ತಿರುವ ಬಗ್ಗೆ ಬಿಬಿಎಂಪಿ ಗಮನ ಸೆಳೆದರೂ ಪ್ರಯೋಜನ ಆಗಿಲ್ಲ~ ಎಂದು ದೂರಿ 2010ರಲ್ಲಿ ಸಂಘಟನೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.

ಈ ಬಗ್ಗೆ ಪರಿಶೀಲಿಸುವಂತೆ ಹಾಗೂ ಒಂದು ವೇಳೆ ಕಟ್ಟಡ ಅಕ್ರಮವಾಗಿದ್ದರೆ ಅದನ್ನು ತೆರವುಗೊಳಿಸುವಂತೆ ಅದೇ ಸಾಲಿನ ಏ.23ರಂದು ಕೋರ್ಟ್ ಆದೇಶಿಸಿತ್ತು. ಈ ಆದೇಶ ಪಾಲನೆಗೆ ನ್ಯಾಯಾಲಯ, ಎರಡು ವಾರ ಗಡುವು ನೀಡಿತ್ತು.

ವರ್ಷ ಕಳೆದರೂ ಬಿಬಿಎಂಪಿ ಕ್ರಮ ತೆಗೆದುಕೊಂಡಿಲ್ಲ ಎಂದು ಸಂಘಟನೆ ಪುನಃ ಕೋರ್ಟ್ ಮೊರೆ ಹೋಗಿದೆ. ಈ ಇಬ್ಬರು ಎಂಜಿನಿಯರ್ಗಳು ಹೈಕೋರ್ಟ್ ಆದೇಶದ ಮೇರೆಗೆ ಖುದ್ದು ಹಾಜರು ಇದ್ದರು. ತಾವು ಈಚೆಗಷ್ಟೇ ಅಧಿಕಾರ ಸ್ವೀಕರಿಸಿರುವ ಕಾರಣ, ತಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು. ಈ ಹಿಂದಿನ ಅಧಿಕಾರಿಗಳ ಹೆಸರನ್ನು ನ್ಯಾಯಮೂರ್ತಿಗಳು ಕೇಳಿದಾಗ `ನಮಗೆ ನೆನಪಿಲ್ಲ~ ಎಂದರು.

`ಅಮಾನತು ಮಾಡಿ, ಸಂಬಳ ಕಡಿತಗೊಳಿಸಿ~
ಒಳಚರಂಡಿ ಮತ್ತು ಮ್ಯಾನ್ಹೋಲ್ ಶುಚಿಗೊಳಿಸಲು ಯಂತ್ರಗಳನ್ನು ಮಾತ್ರ ಬಳಸಲಾಗುವುದು ಎಂದು ಸರ್ಕಾರ ಹೈಕೋರ್ಟ್ಗೆ ವಾಗ್ದಾನ ಮಾಡಿರುವ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಜುಲೈ 22ರಂದು ಇದೇ ಕಾರಣಕ್ಕೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವುದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

`ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು, ಇಲ್ಲವೇ ಅವರ ಸಂಬಳ ಕಡಿತಗೊಳಿಸಬೇಕು. ಅಂದರೆ ಮಾತ್ರ ಇಂತಹ ಘಟನೆ ಮರುಕಳಿಸುವುದಿಲ್ಲ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಶುಚಿ ಕಾರ್ಯಕ್ಕೆ ಕಾರ್ಮಿಕರ ಬಳಕೆ ಮಾಡುತ್ತಿರುವುದರ ವಿರುದ್ಧ ಹಿರಿಯ ವಕೀಲ ಆರ್.ಎನ್.ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಹೈಕೋರ್ಟ್ ಆದೇಶವನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಅರ್ಜಿದಾರರ ಪರ ವಕೀಲ ಪ್ರೊ.ರವಿವರ್ಮಕುಮಾರ್ ಪೀಠದ ಗಮನ ಸೆಳೆದರು. ಕಾರ್ಮಿಕರ ಈ ದುಃಸ್ಥಿತಿಗೆ ಪೀಠ ತೀವ್ರ ವಿಷಾದ ವ್ಯಕ್ತಪಡಿಸಿತು.

ಹೈಕೋರ್ಟ್ಗೆ ಪಾಸ್ಕಲ್
ಮೂರೂವರೆ ವರ್ಷದ ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಹೊತ್ತ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಹಿರಿಯ ಅಧಿಕಾರಿ ಪಾಸ್ಕಲ್ ಮುಜುರಿಯರ್ ಜಾಮೀನು ಕೋರಿ ಬುಧವಾರ ಹೈಕೋರ್ಟ್ ಮೊರೆ ಹೋಗಿದ್ದಾರೆ.

`ಪತಿ ಪಾಸ್ಕಲ್ ಅವರು ಮಗುವಿನ ಮೇಲೆ ಒಂದೂವರೆ ವರ್ಷದಿಂದ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ~ ಎಂದು ಆರೋಪಿಸಿ ಪಾಸ್ಕಲ್ ಪತ್ನಿ ಸುಜಾ ಜೋನ್ಸ್ ಅವರು ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ಜೂ. 14ರಂದು ಪ್ರಕರಣ ದಾಖಲಿಸಿದ್ದರು.

ಆದುದರಿಂದ ಅವರನ್ನು ಬಂಧಿಸಲಾಗಿತ್ತು. ಇವರಿಗೆ ಜಾಮೀನು ನೀಡಲು ಸೆಷನ್ಸ್ ಕೋರ್ಟ್ ನಿರಾಕರಿಸಿದೆ. ಸೆಷನ್ಸ್ ಕೋರ್ಟ್ ಆದೇಶದ ರದ್ದತಿಗೆ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿರುವ ನ್ಯಾಯಮೂರ್ತಿ ವಿ.ಜಗನ್ನಾಥನ್ ವಿಚಾರಣೆಯನ್ನು ಮುಂದೂಡಿದ್ದಾರೆ.

ಶಾಲೆಗಳಲ್ಲಿ ಸೌಕರ್ಯ ಕೊರತೆ
ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯಗಳ ವ್ಯವಸ್ಥೆ ಸರಿಯಾಗಿ ಇಲ್ಲದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, `ಇದೇ ಕಾರಣಕ್ಕೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಾರೆ~ ಎಂದು ತರಾಟೆಗೆ ತೆಗೆದುಕೊಂಡಿತು.

ಶೌಚಾಲಯ ಹಾಗೂ ಶಾಲೆಗಳನ್ನು ಶುಚಿಗೊಳಿಸಲು ಕೆಲಸದವರು ಇಲ್ಲದ ಬಗ್ಗೆ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠದ ಗಮನಕ್ಕೆ ಬಂತು. ಈ ಬಗ್ಗೆ ಸರ್ಕಾರದ ಪರ ವಕೀಲರನ್ನು ಪೀಠ ಕೇಳಿದಾಗ ವಕೀಲರು, `ಕ್ರಮ ತೆಗೆದುಕೊಳ್ಳಲಾಗುವುದು~ ಎಂದರು.

ಇದನ್ನು ಕೇಳಿದ ನ್ಯಾ.ಸೇನ್, `ನೀವೇ (ಸರ್ಕಾರ) ಖುದ್ದಾಗಿ ಏನೂ ಮಾಡಲು ಬರುವುದಿಲ್ಲವೆ, ಎಲ್ಲದಕ್ಕೂ ಹೈಕೋರ್ಟ್ ಆದೇಶ ಬೇಕೆ~ ಎಂದು ಪ್ರಶ್ನಿಸಿದರು. `ಶಾಲೆಗಳಲ್ಲಿ ಶುಚಿ ಕಾರ್ಯಕ್ಕೆ ಕೆಲಸದವರು ಇಲ್ಲದಿದ್ದರೆ, ಶಿಕ್ಷಕರು ಅದನ್ನು ಮಾಡಬೇಕು ಎಂದು ನೀವು ಬಯಸುತ್ತೀರಾ, ಅದೂ ಸಾಲದು ಎನ್ನುವುದಕ್ಕೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಶಾಲಾ ಅವಧಿಯಲ್ಲಿಯೇ ಹೊರಕ್ಕೆ ಹೋಗುವುದು ಕೂಡ ನಮ್ಮ ಗಮನಕ್ಕೆ ಬಂದಿದೆ. ಈ ರೀತಿ ಇನ್ನು ಮುಂದೆ ಆಗಬಾರದು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.