ದೊಡ್ಡಬಳ್ಳಾಪುರ:ತಾಲ್ಲೂಕಿನ ಪ್ರಸಿದ್ಧ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹುಂಡಿಹಣವನ್ನು ಎಣಿಕೆ ಮಾಡಲಾಗಿದ್ದು, ಈ ಬಾರಿಯೂ ವಿದೇಶಿ ಹಾಗೂ ನಿಷೇಧಿತ ನೋಟುಗಳು ಸಿಕ್ಕಿವೆ.

ಹುಂಡಿಯಲ್ಲಿ ₹28,18,831 ಸಂಗ್ರಹವಾಗಿದೆ. ಇದರೊಂದಿಗೆ 2 ಗ್ರಾಂ ಚಿನ್ನ, 1,250 ಕೆ.ಜಿ ಬೆಳ್ಳಿ ಹುಂಡಿಯಲ್ಲಿ ಸಿಕ್ಕಿದೆ.

ಅಮೆರಿಕ, ಮಲೇಷ್ಯಾ, ಯೂರೋಪ್ ದೇಶಗಳ ವಿದೇಶಿ ನೋಟುಗಳು ಸಿಕ್ಕಿವೆ. ಇದರೊಂದಿಗೆ ನಿಷೇಧಿತ ₹500ರ 23 ನೋಟುಗಳನ್ನು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ. ಮುಜರಾಯಿ ತಹಶೀಲ್ದಾರ್ ಕೆ.ಪದ್ಮ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥಾಚಾರ್ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು.

ಹುಂಡಿಯನ್ನು ತೆರೆದು ಎಣಿಕೆ ಮಾಡುವ ಸಂದರ್ಭದಲ್ಲಿ ದೇವಾಲಯ ಅಧೀಕ್ಷಕ ನಾರಾಯಣಸ್ವಾಮಿ, ವ್ಯವಸ್ಥಾಪನಾ ಸಮಿತಿ ಗೌರವ ಅಧ್ಯಕ್ಷ ಜಿ.ಎಂ.ಚನ್ನಪ್ಪ ಸದಸ್ಯರಾದ ಓಬದೇನಹಳ್ಳಿ ಮುನಿಯಪ್ಪ, ಮುನಿರಾಜು, ಮಂಜಣ್ಣ, ಸುಬ್ರಹ್ಮಣ್ಯ ನಾಯಕ್, ಕೆ.ನಾಗರತ್ನಮ್ಮ, ಭ್ರಮರಾಂಭಿಕಾ ಮುತ್ತಣ್ಣ, ಪ್ರಧಾನ ಅರ್ಚಕ ಎನ್.ಶ್ರೀನಿಧಿ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.