ಬೆಂಗಳೂರು: ಭಾರತೀಯ ವಾಯುಪಡೆಯ ತರಬೇತಿ ಕೇಂದ್ರದ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಪರಮ್‌ಜಿತ್ ಸಿಂಗ್ ಗಿಲ್ ಅವರು ಕೇಂದ್ರದ ನಿವೃತ್ತ ಮುಖ್ಯಸ್ಥ ಏರ್ ಮಾರ್ಷಲ್ ರಾಜಿಂದರ್ ಸಿಂಗ್ ಅವರಿಂದ ಸೋಮವಾರ ಅಧಿಕಾರ ಸ್ವೀಕರಿಸಿದರು.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಮಾಡಿರುವ ಗಿಲ್ 1975ರಲ್ಲಿ ವಾಯುಪಡೆಗೆ ಆಯ್ಕೆಯಾದರು. ವೃತ್ತಿ ಜೀವನ ಆರಂಭದ ದಿನಗಳಲ್ಲಿ ಯುದ್ಧ ವಿಮಾನಗಳ ಚಾಲನೆ ಹಾಗೂ ನಿರ್ವಹಣೆಯಲ್ಲಿ ನೈಪುಣ್ಯ ಸಾಧಿಸಿದ ಅವರು ಮಿಗ್ 23 ಬಿಎನ್ ಸೇರಿ ದಂತೆ ಅತ್ಯಾಧು ನಿಕ ಯುದ್ಧ ವಿಮಾನಗಳ ಚಾಲನೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.

ವಡ್ಸಾರ್ ವಾಯುಪಡೆ ಕೇಂದ್ರದ ಕಮಾಂಡೆಂಟ್, ಸಿಕಂದರಾಬಾದ್‌ನ ವಾಯುಪಡೆ ಕಾಲೇಜಿನ ಉಪ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದ ಗಿಲ್ 2009ರಲ್ಲಿ ರಾಷ್ಟ್ರಪತಿಯವರ `ಅತಿ ವಿಶಿಷ್ಟ ಸೇವಾ ಪದಕ' ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.