ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಮರುಮೌಲ್ಯಮಾಪನ: ಅಂಕ ಕಳೆದುಕೊಂಡ 353 ಮಂದಿ!

Last Updated 28 ಮೇ 2019, 8:58 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ಮರುಮೌಲ್ಯಮಾಪಕ್ಕೆ ಅರ್ಜಿ ಸಲ್ಲಿಸಿದ 353 ಮಂದಿ ಅಂಕ ಕಳೆದುಕೊಂಡಿದ್ದಾರೆ.

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ 13,370 ಮಂದಿಯ ಪೈಕಿ 2,407 ಮಂದಿ ಹೆಚ್ಚುವರಿ ಅಂಕ ಗಳಿಸಿದ್ದರೆ, 353 ಮಂದಿ ಅಂಕ ಕಳೆದುಕೊಂಡಿದ್ದಾರೆ.

‘ಪದವಿಪೂರ್ವ ಶಿಕ್ಷಣ ಇಲಾಖೆಯ ನಿಯಮದಂತೆ ಮರುಮೌಲ್ಯಮಾಪನದ ವೇಳೆ 6 ಅಂಕ ಹೆಚ್ಚಾದರೆ ಅದು ಒಟ್ಟು ಅಂಕಕ್ಕೆ ಸೇರ್ಪಡೆಯಾಗುತ್ತದೆ, 6 ಅಂಕ ಕಡಿಮೆಯಾದರೆ ಒಟ್ಟಾರೆಯಾಗಿ ಆರು ಅಂಕ ಕಡಿಮೆಯಾಗುತ್ತದೆ. ಅಂಕ ಕಡಿಮೆಯಾಯಿತು ಎಂದು ಹೇಳಿ ವಿದ್ಯಾರ್ಥಿಗಳು ಬಳಿಕ ದೂರು ಹೇಳಿಕೊಂಡರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಹೀಗಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಮಧ್ಯೆ, ಮರುಮೌಲ್ಯಮಾಪನದ ವೇಳೆ 5ಕ್ಕಿಂತ ಅಧಿಕ ಅಂಕ ಕೂಡಿದರೆ ಅಥವಾ ಕಳೆದರೆ, ಮೂಲ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ದಂಡ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT