ಬೆಂಗಳೂರು: ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯಲ್ಲಿ ಅಕ್ರಮ ನಡೆಸಿರುವ ಆರೋಪದ ಮೇಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರ್ಮಸಿಂಗ್, ಬಿ.ಎಸ್.ಯಡಿಯೂರಪ್ಪ ಸೇರಿದಂತೆ 102 ಜನರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಬುಧವಾರ ಖಾಸಗಿ ದೂರು ಸಲ್ಲಿಸಿದ್ದಾರೆ.

`1995ರಲ್ಲಿ ಯೋಜನೆ ಆರಂಭವಾದ ದಿನದಿಂದಲೂ ಹಲವು ಅಕ್ರಮಗಳು ನಡೆದಿವೆ. ಇದು ಅತ್ಯಂತ ದೊಡ್ಡ ವಂಚನೆ~ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಆರೋಪಿಸಲಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನೈಸ್ ಸಂಸ್ಥೆ ಅಧ್ಯಕ್ಷ ಅಶೋಕ್ ಖೇಣಿ, ಅಮೆರಿಕದ ಮಸಾಚುಸೆಟ್ಸ್ ಗವರ್ನರ್ ವಿಲಿಯಂ ವೆಲ್ಡ್, ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಶಾಸಕ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನೂ ಆರೋಪಿಗಳ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಸೇರಿದಂತೆ 57 ಐಎಎಸ್ ಅಧಿಕಾರಿಗಳು, ರಾಜ್ಯ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ, ಭಾರತ್ ಫೋರ್ಜ್ ಕಂಪೆನಿಯ ಅಧ್ಯಕ್ಷ ಬಾಬಾ ಕಲ್ಯಾಣಿ, ಐಸಿಐಸಿಐ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣ ವಘಲ್ ಮತ್ತಿತರರನ್ನೂ ಆರೋಪಿಗಳೆಂದು ಉಲ್ಲೇಖಿಸಲಾಗಿದೆ.

147 ಪುಟಗಳ ದೂರು ಮತ್ತು 3,368 ಪುಟಗಳಷ್ಟು ದಾಖಲೆಗಳನ್ನು ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಬ್ರಹಾಂ, ದೂರನ್ನು ವಿಚಾರಣೆಗೆ ಸ್ವೀಕರಿಸುವಂತೆ ನ್ಯಾಯಾಧೀಶ ಎನ್.ಕೆ.ಸುದೀಂಧ್ರ ರಾವ್ ಅವರಿಗೆ ಮನವಿ ಮಾಡಿದರು.

`ಬೆಂಗಳೂರು-ಮೈಸೂರು ನಡುವೆ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣದ ಪ್ರಸ್ತಾವವನ್ನು ಭಾರತ್ ಫೋರ್ಜ್ ನೇತೃತ್ವದ `ಕನ್ಸೋರ್ಟಿಯಂ~ (ಕಂಪೆನಿಗಳ ಕೂಟ) ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಬೆಂಗಳೂರಿನ ಪುರಭವನದವರೆಗೂ ಈ ಹೆದ್ದಾರಿ ನಿರ್ಮಿಸುವ ಪ್ರಸ್ತಾವವಿತ್ತು. 550 ಕೋಟಿ ರೂಪಾಯಿಯನ್ನು ತಾನೇ ತೊಡಗಿಸುವುದಾಗಿ ಮತ್ತು 1,000 ಕೋಟಿ ರೂಪಾಯಿಯನ್ನು ಸಾಲ ಪಡೆದು ಹೂಡಿಕೆ ಮಾಡುವುದಾಗಿ ಈ `ಕೂಟ~ ಹೇಳಿತ್ತು. ನಂತರ `ಕೂಟ~ ಬದಲಿಗೆ `ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್~ (ನೈಸ್) ಸಂಸ್ಥೆಗೆ ಯೋಜನೆ ಅನುಷ್ಠಾನದ ಜವಾಬ್ದಾರಿ ನೀಡಲಾಯಿತು. ಈ ಯೋಜನೆಗಾಗಿ 1,913 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ವಾರ್ಷಿಕ 10 ರೂಪಾಯಿ ದರದಲ್ಲಿ ಗುತ್ತಿಗೆಗೆ ನೀಡಿತ್ತು. ಇದೇ ಭೂಮಿಯನ್ನು ಐಸಿಐಸಿಐ ಬ್ಯಾಂಕಿಗೆ ಅಡವಿಟ್ಟ `ನೈಸ್~ 150 ಕೋಟಿ ರೂಪಾಯಿ ಸಾಲ ಪಡೆದಿದೆ. ಅದರಲ್ಲೇ ಹತ್ತು ಕೋಟಿ ರೂಪಾಯಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಪಾವತಿಸಿದೆ~ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

`ಎಂಟು ಬಗೆಯ ಅಕ್ರಮಗಳು ಈ ಯೋಜನೆಯಲ್ಲಿ ನಡೆದಿವೆ. ಆದರೆ, ಸರ್ಕಾರ ಯಾವುದರ ಬಗ್ಗೆಯೂ ಪರಿಶೀಲನೆ ನಡೆಸಿಲ್ಲ. ಭೂಮಿಯನ್ನು ಅಡವಿರಿಸಿಕೊಂಡು ಸಾಲ ನೀಡಿದ ಐಸಿಐಸಿಐ ಬ್ಯಾಂಕಿನ ಅಂದಿನ ಅಧ್ಯಕ್ಷ ವಘಲ್ `ನೈಸ್~ ಕಂಪೆನಿಯ ಸಹವರ್ತಿ ಸಂಸ್ಥೆ `ನೆಸೆಲ್~ ಆಡಳಿತ ಮಂಡಳಿಯಲ್ಲೂ ಇದ್ದಾರೆ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರೆಲ್ಲ ಈ ಯೋಜನೆಯಲ್ಲಿನ ಅಕ್ರಮಗಳಿಗೆ ಸಹಕಾರ ನೀಡಿದ್ದಾರೆ. ಆರಂಭದಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ ಯಡಿಯೂರಪ್ಪ ಅವರು ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಆದರೆ, ಮುಖ್ಯಮಂತ್ರಿ ಹುದ್ದೆಗೇರಿದ ಬಳಿಕ ಖೇಣಿಯವರ ತಾಳಕ್ಕೆ ತಕ್ಕಂತೆ ಕುಣಿದಿರುವುದು ದಾಖಲೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ~ ಎಂದು ಅಬ್ರಹಾಂ ದೂರಿನಲ್ಲಿ ಆರೋಪಿಸಿದ್ದಾರೆ.

`ಖೇಣಿ ಅವರು ಬಾಬಾ ಕಲ್ಯಾಣಿ ಜೊತೆಗೂಡಿ ದಾಖಲೆಗಳನ್ನು ತಿರುಚಿದ್ದಾರೆ. ಒಂದು ಪೈಸೆಯನ್ನೂ ಹೂಡಿಕೆ ಮಾಡದೇ 4,500 ಎಕರೆ ಭೂಮಿಯನ್ನು ತಮ್ಮ ಕಂಪೆನಿಯ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ~ ಎಂದು ದೂರಿದ್ದಾರೆ. ಬುಧವಾರ ಅರ್ಜಿದಾರರ ಹೇಳಿಕೆಯನ್ನು ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.