ಬೆಂಗಳೂರು: `ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಮೌಲ್ಯಗಳನ್ನು ಹೊಂದಿರುವ ಭಗವದ್ಗೀತೆಯ ಶ್ಲೋಕಗಳನ್ನು ಸರಳ ರೂಪದಲ್ಲಿ ನೀಡುವ ಮೂಲಕ ಕಬ್ಬಿನಾಲೆಯವರು ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ~ ಎಂದು ಹಿರಿಯ ಸಂಶೋಧಕ ಪ್ರೊ.ಹಂಪ ನಾಗರಾಜಯ್ಯ ಶ್ಲಾಘಿಸಿದರು.

ಸುಂದರ ಪ್ರಕಾಶನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರ `ಭಗವಂತನ ಭಾವಗೀತೆ~ ಮತ್ತು ಎಸ್.ಎ.ಕೀರ್ತನಾ ಅವರ ಇಂಗ್ಲಿಷ್ ಕಾದಂಬರಿ `ದಿ ಕೆರಿಯಾಡ್ಸ್~ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಭಗವದ್ಗೀತೆಯಲ್ಲಿರುವ ವಿಚಾಧಾರೆಯು ಕಾಲಕ್ಕೆ ಅನುಗುಣವಾಗಿ ಮರುಹುಟ್ಟು ಪಡೆಯಬೇಕು. ಜೀವನ ತತ್ವವನ್ನು ಅದ್ಭುತವಾಗಿ ಬೋಧಿಸುವ ಗೀತೆ ಸಾರವು ಸದಾ ಸಾಹಿತ್ಯಾಸಕ್ತರನ್ನು ಹಿಡಿದಿಡುತ್ತದೆ~ ಎಂದು ಹೇಳಿದರು.

`ವಯೋಸಹಜ ಕಲ್ಪನೆಯ ಮೂಸೆಯಲ್ಲಿ ಕೀರ್ತನಾ ಅವರ ಕೆರಿಯಾಡ್ಸ್ ಪುಸ್ತಕವು ಅರಳಿದ್ದು, ವಯಸ್ಸಿಗೆ ಮೀರಿದ ಶಬ್ಧ ಭಂಡಾರದ ಬಳಕೆಯಿಂದ ಓದುಗರನ್ನು ಅಚ್ಚರಿಗೊಳಿಸುತ್ತಾರೆ. `ಭಗವಂತನ ಭಾವಗೀತೆ~ ದಾರ್ಶನಿಕ ನೆಲೆಯಲ್ಲಿದ್ದರೆ, ಕೆರಿಯಾಡ್ಸ್ ಕಾಲ್ಪನಿಕವಾಗಿ ಗಟ್ಟಿಗೊಂಡಿದೆ~ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, `ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುವ ಭಗವದ್ಗೀತೆಯನ್ನು ಹದವಾದ ಭಾವ ಮತ್ತು ಕಾವ್ಯದ ಮೂಲಕ ಕಟ್ಟಿಕೊಟ್ಟಿರುವುಅೇ ಒಂದು ವಿಶೇಷ. ರೋಚಕ ಸನ್ನಿವೇಶಗಳನ್ನು ಒಳಗೊಂಡಿರುವ ಕೆರಿಯಾಡ್ಸ್ ಕೂಡ ಹ್ಯಾರಿಪಾಟರ್‌ನ ಪ್ರಭಾವದಿಂದ ಮುಕ್ತವಾಗಿಲ್ಲವೆಂಬುದು ಸ್ಪಷ್ಟಗೊಳ್ಳುತ್ತದೆ~ ಎಂದರು.

`13ನೇ ವಯಸ್ಸಿಗೆ ರೋಚಕ ಪಾತ್ರಗಳನ್ನು ಸೃಷ್ಟಿಸಿ, ನಿರೂಪಿಸಿರುವ ಕೀರ್ತನಾ ಅವರದ್ದು ದೈತ್ಯ ಪ್ರತಿಭೆ. ತಮ್ಮ ಕಾದಂಬರಿಯಲ್ಲಿ ಒಳಿತು- ಕೆಡುಕುಗಳ ನಡುವೆ ನಡೆಯುವ ಸಂಘರ್ಷವನ್ನು ವಿಭಿನ್ನವಾಗಿ ನಿರೂಪಿಸಿದ್ದಾರೆ~ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕ್ಲಾರಿಯೋನೆಟ್ ವಾದಕ ಡಾ.ನರಸಿಂಹಲು ವಡವಾಟಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಟ ಶ್ರೀಧರ್, ಪ್ರಕಾಶನದ ಗೌರಿ ಸುಂದರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.