ಬೆಂಗಳೂರು (ಪಿಟಿಐ): ಸೆಪ್ಟೆಂಬರ್,ಅಕ್ಟೋಬರ್ ತಿಂಗಳಲ್ಲಿ ನಡೆಸಿದ ದಾಳಿಗಳಲ್ಲಿ, ರಾಜ್ಯದ ಗೃಹ ನಿರ್ಮಾಣ ಸಹಕಾರಿ ಸಂಘಗಳ ₨ 300 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಪತ್ತೆ ಮಾಡಿರುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.

‘ಕರ್ನಾಟಕ, ಗೋವಾ ವಿಭಾಗದ ತನಿಖಾ ನಿರ್ದೇಶನಾಲಯ ಸಹಕಾರಿ ಗೃಹ ನಿರ್ಮಾಣ ಸಂಘಗಳ ಮೇಲೆ ದಾಳಿ ನಡೆಸಿತ್ತು. ಅಲ್ಲಿ ಪತ್ತೆಯಾದ ₨ 300 ಕೋಟಿ ಹಣ ಯಾವ ಮೂಲದಿಂದ ಬಂದಿದೆ ಎಂಬ ಬಗ್ಗೆ ದಾಖಲೆಗಳೇ ಇಲ್ಲ’ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

ದಾಳಿ ವೇಳೆ ದೊರೆತ ದಾಖಲೆಗಳ ಪರಿಶೀಲನೆ ಮತ್ತು ತನಿಖಾ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ ಎಂದು ಇಲಾಖೆ ಹೇಳಿದೆ.

ಹಲವಾರು ಗೃಹ ನಿರ್ಮಾಣ ಸಂಘಗಳು ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಮೊತ್ತ ಪಾವತಿಸಿಲ್ಲ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.