ಬೆಂಗಳೂರು: `ವನ್ಯಜೀವಿ ಛಾಯಾಗ್ರಹಣ ಸವಾಲಿನ ಕೆಲಸ. ಆದರೆ ಈ ಕಾರ್ಯಕ್ಕೆ ಹೆಚ್ಚಿನ ಮಾನ್ಯತೆ ಸಿಗದಿರುವುದು ದುರದೃಷ್ಟಕರ~ ಎಂದು ವನ್ಯಜೀವಿ ಛಾಯಾಚಿತ್ರಕಾರ ಟಿ.ಎನ್.ಎ. ಪೆರುಮಾಳ್ ವಿಷಾದಿಸಿದರು.

ಬ್ರಿಟಿಷ್ ಲೈಬ್ರರಿಯು ಕೆನ್ನೆತ್ ಆ್ಯಂಡರ್‌ಸನ್ ನೇಚರ್ ಸೊಸೈಟಿ ಸಹಯೋಗದಲ್ಲಿ ನಗರದ ಕಸ್ತೂರ ಬಾ ರಸ್ತೆಯಲ್ಲಿನ ಬ್ರಿಟಿಷ್ ಲೈಬ್ರರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ವನ್ಯಜೀವಿ ಛಾಯಾಗ್ರಹಣ~ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

`ದಟ್ಟಾರಣ್ಯದಲ್ಲಿ ವನ್ಯಜೀವಿಗಳ ನಿರೀಕ್ಷೆಯಲ್ಲಿ ಹಲವು ದಿನಗಳನ್ನು ಕಳೆಯಬೇಕಾಗುತ್ತದೆ. ಅಸಾಧಾರಣ ತಾಳ್ಮೆ, ಕ್ರಿಯಾಶೀಲ ಚಿಂತನೆ ಹಾಗೂ ತೀವ್ರ ಕುತೂಹಲ ಮನೋಭಾವವಿದ್ದರಷ್ಟೇ ವನ್ಯಜೀವಿ ಛಾಯಾಚಿತ್ರಕಾರರಾಗಲು ಸಾಧ್ಯ~ ಎಂದರು.

`ವನ್ಯಜೀವಿ ಛಾಯಾಗ್ರಹಣಕ್ಕೆ ಒಂದಷ್ಟು ಸಿದ್ಧತೆ ಬೇಕು. ಆ ಪ್ರದೇಶದಲ್ಲಿರುವ ಪ್ರಾಣಿಗಳ ವಿವರ, ಅವುಗಳ ದೇಹ ಗಾತ್ರ, ಎತ್ತರ, ಉದ್ದ, ದಾಳಿ ನಡೆಸುವ ವಿಧಾನ ಇತರೆ ಅಂಶಗಳನ್ನು ತಿಳಿದುಕೊಂಡಿರಬೇಕು.

ಬಹಳ ಎಚ್ಚರಿಕೆಯಿಂದ ಕ್ಯಾಮೆರಾ ಕ್ಲಿಕ್ ಮಾಡಬೇಕು. ಅಪರೂಪದ ಸನ್ನಿವೇಶವನ್ನು ಅಷ್ಟೇ ಪರಿಣಾಮಕಾರಿಯಾಗಿ ಸೆರೆ ಹಿಡಿಯುವ ಕಲೆ ರೂಢಿಸಿಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು.

`ವನ್ಯಜೀವಿ ಛಾಯಾಗ್ರಹಣ ಎಂದರೆ ಹುಲಿ, ಚಿರತೆ, ಆನೆಗಳ ಹಿಂಡು... ಹೀಗೆ ಕ್ರೂರ ಹಾಗೂ ದೈತ್ಯ ಪ್ರಾಣಿಗಳ ಚಿತ್ರ ಸೆರೆ ಹಿಡಿಯುವುದು ಎಂಬಂತಾಗಿದೆ. ಇದು ತಪ್ಪು ಗ್ರಹಿಕೆ. ಅರಣ್ಯದಲ್ಲಿನ ಪ್ರತಿಯೊಂದು ಜೀವಿಯೂ ವನ್ಯಜೀವಿಯೇ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.