ಮಹದೇವಪುರ: ವರ್ತೂರು ವಾರ್ಡ್ ವ್ಯಾಪ್ತಿಯ ಪಣತ್ತೂರು ಗ್ರಾಮದ ಮುನಿರೆಡ್ಡಿ ಹಾಗೂ ಕಾವೇರಪ್ಪ ಬಡಾವಣೆಯ ಮುಖ್ಯ ರಸ್ತೆಗಳನ್ನು ಒಟ್ಟು 40 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ಡಾಂಬರೀಕರಣಗೊಳಿಸಲಾಯಿತು.ಅಲ್ಲದೆ ಎರಡೂ ಬಡಾವಣೆಗಳ ಅಡ್ಡ ರಸ್ತೆಗಳನ್ನು ಸಹ ಡಾಂಬರೀಕರಣಗೊಳಿಸಲಾಯಿತು. ಈ ಕಾಮಗಾರಿಗೆ ವರ್ತೂರು ವಾರ್ಡ್ನ ಬಿಬಿಎಂಪಿ ಸದಸ್ಯ ಎಸ್. ಉದಯಕುಮಾರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ವಾರ್ಡ್ನ ಎಲ್ಲಾ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಂಡಂತಹ ಬಡಾವಣೆಗಳಲ್ಲಿನ ರಸ್ತೆಗಳನ್ನು ಸಹ ತಮ್ಮ ಬಿಬಿಎಂಪಿ ಅನುದಾನದಲ್ಲಿ ಡಾಂಬರೀಕರಣಗೊಳಿಸಲಾಗುವುದು. ಹಳ್ಳಿಗಳಂತಿರುವ ಗುಂಜೂರು, ಪಣತ್ತೂರು, ಮಧುರಾನಗರ ಹಾಗೂ ಗುಂಜೂರುಪಾಳ್ಯದಂತಹ ಗ್ರಾಮಗಳಲ್ಲಿನ ರಸ್ತೆಯನ್ನು ಸಹ ನಗರದಲ್ಲಿನ ರಸ್ತೆಗಳಂತೆ ಅಭಿವೃದ್ದಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಮಧುರಾನಗರದಲ್ಲಿನ ಮುಖ್ಯ ರಸ್ತೆಯನ್ನು ಈಗಾಗಲೇ 60 ಲಕ್ಷ ರೂ.ಗಳ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲಾಗಿದೆ. ಬಳಗೆರೆ ಹಾಗೂ ಪಣತ್ತೂರು-ಕಾಡಬೀಸನಹಳ್ಳಿ ಮುಖ್ಯ ರಸ್ತೆಯನ್ನು ಸಹ ಸಂಪೂರ್ಣವಾಗಿ ವಿಸ್ತರಣೆ ಮಾಡಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.