ನೆಲಮಂಗಲ: ನ್ಯಾಯಾಧೀಶರೊಬ್ಬರ ಕಾರನ್ನು ಹಿಂದಿಕ್ಕಿ ಅಡ್ಡಲಾಗಿ ನಿಲ್ಲಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ತುಮಕೂರು ಶಾಸಕ ಸುರೇಶ್ಗೌಡ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಎಸ್ಟಿಎಟಿ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರ್ ಅವರು ಕುಟುಂಬ ಸಮೇತರಾಗಿ ತುಮಕೂರು ಕಡೆಯಿಂದ ಬೆಂಗಳೂರಿಗೆ ಭಾನುವಾರ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಸಂಜೆ 6.15 ಸುಮಾರಿನಲ್ಲಿ ನವಯುಗ ಟೋಲ್ ಬಳಿ ಟೋಲ್ ಸುಂಕ ಕಟ್ಟಲು ನಿಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ರಭಸವಾಗಿ ಬಂದ ಶಾಸಕ ಸುರೇಶ್ಗೌಡ ಅವರ ಕಾರು ನ್ಯಾಯಾಧೀಶ ವಿದ್ಯಾಧರ್ ಅವರ ಕಾರನ್ನು ಹಿಂದಿಕ್ಕಿ ಅಡ್ಡಲಾಗಿ ನಿಲ್ಲಿಸಿತು. ಕಾರನ್ನು ಹಿಂದಿಕ್ಕಿದ ಕ್ರಮವನ್ನು ನ್ಯಾಯಾಧೀಶರು ಪ್ರಶ್ನಿಸಲು ಮುಂದಾದಾಗ ಸುರೇಶ್ಗೌಡ ಮತ್ತು ಅವರ ಸಂಗಡಿಗರು ಕಾರಿನಿಂದ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅಲ್ಲದೆ, ಹಲ್ಲೆ ನಡೆಸಲು ಮುಂದಾದರು ಎಂದು ನ್ಯಾಯಾಧೀಶ ವಿದ್ಯಾಧರ್ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಬ್ ಇನ್ಸ್ಪೆಕ್ಟರ್ ರಂಗಸ್ವಾಮಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.