ಬೆಂಗಳೂರು: ಸೂರ್ಯನಗರದ ಎಲ್ಲ ಹಂತಗಳ ಬಡಾವಣೆ ಮತ್ತು ಆನೇಕಲ್ ಪಟ್ಟಣಕ್ಕೆ ಕಾವೇರಿ ನೀರು ಸರಬರಾಜು ಮಾಡಲು 800 ಕೋಟಿ ರೂಪಾಯಿ ಮೊತ್ತದ ಯೋಜನೆ ಸಿದ್ಧ ಆಗಿದೆ ಎಂದು ವಸತಿ ಸಚಿವ ಅಂಬರೀಷ್ ಸೋಮವಾರ ಇಲ್ಲಿ ತಿಳಿಸಿದರು.

ಶಿಂಷಾ ನದಿಯಿಂದ ಚನ್ನಪಟ್ಟಣದ ಇಗ್ಗಲೂರು ಅಣೆಕಟ್ಟೆಗೆ ನೀರು ಸರಬರಾಜು ಮಾಡಲಾಗುವುದು. ಅಲ್ಲಿಂದ 64 ಕಿ.ಮೀ ದೂರದ ಸೂರ್ಯನಗರ, ಆನೇಕಲ್ ಪಟ್ಟಣ ಮತ್ತು ಮಾರ್ಗಮಧ್ಯದ ಹಳ್ಳಿಗಳಿಗೆ ಕುಡಿಯುವ ನೀರು ಪಂಪ್ ಮಾಡಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ವಾರ್ಷಿಕ ಎರಡು ಟಿ.ಎಂ.ಸಿ ಅಡಿ ನೀರು ಬೇಕಾಗುತ್ತದೆ. ಈ ಸಂಬಂಧ ಕಾವೇರಿ ನದಿ ನೀರು ಪ್ರಾಧಿಕಾರದಿಂದ ನೀರು ಹಂಚಿಕೆಗೆ ತಾತ್ವಿಕ ಅನುಮೋದನೆ ಪಡೆಯಬೇಕಾಗಿದೆ ಎಂದು ಅವರು ಹೇಳಿದರು.

ಈ ಯೋಜನೆಯನ್ನು ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ವತಿಯಿಂದಲೇ ಕೈಗೆತ್ತಿಕೊಳ್ಳಲಾಗುವುದು. ಯೋಜನಾ ವರದಿ ಕೂಡ ಸಿದ್ಧ ಆಗಿದೆ ಎಂದು ಅವರು ವಿವರಿಸಿದರು.

ಆಶ್ರಯ ಮನೆ: ಆಶ್ರಯ ಯೋಜನೆಯಡಿ ಕೈಗೆತ್ತಿಕೊಂಡಿರುವ ಮನೆ ನಿರ್ಮಾಣ ಯೋಜನೆಯನ್ನು ಈ ವರ್ಷ ಪೂರ್ಣಗೊಳಿಸಲಾಗುವುದು. ಈ ವರ್ಷ ಹೆಚ್ಚುವರಿಯಾಗಿ ಎರಡು ಲಕ್ಷ ಮನೆ ನಿರ್ಮಿಸುವ ಉದ್ದೇಶ ಇದ್ದು, ಆದಷ್ಟು ಬೇಗ ಫಲಾನುಭವಿಗಳನ್ನು ಗುರುತಿಸಲಾಗುವುದು ಎಂದು ಹೇಳಿದರು.

ಮಂಡ್ಯದಲ್ಲಿ ಮೇಲ್ಸೇತುವೆ
ಸಂಚಾರ ದಟ್ಟಣೆ ಹೆಚ್ಚು ಇರುವ ಕಾರಣ ಮಂಡ್ಯ ನಗರದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಏಳು ಕಿ.ಮೀ ಉದ್ದದ ರಸ್ತೆ ಮೇಲ್ಸೇತುವೆ ನಿರ್ಮಿಸುವ ಉದ್ದೇಶ ಇದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ವಸತಿ ಸಚಿವ ಅಂಬರೀಷ್ ಸೋಮವಾರ ಇಲ್ಲಿ ತಿಳಿಸಿದರು.

ಉಮ್ಮಡಹಳ್ಳಿ ಗೇಟ್ನಿಂದ ಸಿದ್ಧಯ್ಯನ ಕೊಪ್ಪಲುವರೆಗೆ ಮೇಲ್ಸೇತುವೆ ನಿರ್ಮಿಸುವ ಉದ್ದೇಶ ಇದೆ. ಇದಕ್ಕೆ ಸುಮಾರು 317 ಕೋಟಿ ರೂಪಾಯಿ ವೆಚ್ಚ ಆಗಲಿದ್ದು, ಬಜೆಟ್ನಲ್ಲಿ ಹಣ ಒದಗಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಕೋರಿರುವುದಾಗಿ ಅವರು ಹೇಳಿದರು.
ಮಂಡ್ಯದಲ್ಲಿ ವರ್ತುಲ ರಸ್ತೆ ಅಥವಾ ಬೈಪಾಸ್ ರಸ್ತೆ ನಿರ್ಮಿಸುವ ಚಿಂತನೆ ಇತ್ತು.

ಆದರೆ, ಆ ಭಾಗದಲ್ಲಿ ನೀರಾವರಿ ಜಮೀನು ಇರುವ ಕಾರಣ ಭೂಸ್ವಾಧೀನ ಸಮಸ್ಯೆ ಆಗುತ್ತದೆ. ಈ ಕಾರಣಕ್ಕೆ ಈಗಿರುವ ರಸ್ತೆ ಮೇಲೆಯೇ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.

ಬೆಂಗಳೂರು- ಮೈಸೂರು ನಡುವೆ ವಾಹನ ದಟ್ಟಣೆ ಹೆಚ್ಚಾಗಿದೆ. ಕೆಲವೊಮ್ಮೆ ಮಂಡ್ಯ ನಗರ ದಾಟುವುದಕ್ಕೆ ಒಂದು ಗಂಟೆ ಆಗುತ್ತದೆ. ಹೀಗಾಗಿ ಸುಗಮ ಸಂಚಾರಕ್ಕೆ ಮೇಲ್ಸೇತುವೆ ಒಂದೇ ಪರಿಹಾರ. ಈ ವಿಷಯ ಮುಖ್ಯಮಂತ್ರಿಗೂ ಗೊತ್ತಿದೆ ಎಂದು ಹೇಳಿದರು.

ಬೆಂಗಳೂರು- ಮೈಸೂರು ನಡುವಿನ ಹೆದ್ದಾರಿಯಲ್ಲಿ ಬರುವ ರಾಮನಗರ, ಚನ್ನಪಟ್ಟಣದಲ್ಲೂ ಮೇಲ್ಸೇತುವೆ ನಿರ್ಮಿಸುವ ಅಗತ್ಯ ಇದೆ. ಆ ಬಗ್ಗೆ ಮುಖ್ಯಮಂತ್ರಿ ಪರಿಶೀಲಿಸುತ್ತಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.