ಶುಕ್ರವಾರ, ಜನವರಿ 17, 2020
20 °C

‘ಭಗೀರಥ ದರ್ಶನ’ ಕಾದಂಬರಿ ಡಿ. 21ಕ್ಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಾಂದೀಪನಿ ಶಾಲೆಯಲ್ಲಿ ಡಿ.22ರಂದು ಬೆಳಿಗ್ಗೆ 10ಕ್ಕೆ ಸಂತೇಬೆನ್ನೂರು ಲೋಕೇಶ್ ಅವರ ‘ಭಗೀರಥ ದರ್ಶನ’ ಪೌರಾಣಿಕ ಕಾದಂಬರಿ ಬಿಡುಗಡೆಯಾಗಲಿದೆ.

ಉಪ್ಪಾರ ಸಮಾಜದ ಬಂಧುಗಳು, ಶಿವಮೊಗ್ಗ ಪ್ರಕಾಶನದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೊಸದುರ್ಗ ತಾಲ್ಲೂಕು ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡುವರು. ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಸಿ.ಪುಟ್ಟರಂಗ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಕಾರ್ಯಕ್ರಮ ಉದ್ಘಾಟಿಸುವರು. ಉಪ್ಪಾರ ಧಾರ್ಮಿಕ ಟ್ರಸ್ಟ್‌ ಅಧ್ಯಕ್ಷ ಜಿ.ಭೀಮಪ್ಪ, ಸಾಗರ ಸಾರ್ವಜನಿಕ ಆಸ್ಪತ್ರೆಯ ಡಾ.ಕೆ.ಪರಪ್ಪ ಉಪಸ್ಥಿತರಿರುವರು ಎಂದು ಜಿಲ್ಲಾ ಉಪ್ಪಾರ ಸಂಘದ ಮಾಜಿ ಅಧ್ಯಕ್ಷ ಎಸ್.ಟಿ.ಹಾಲಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಿಪ್ಪನ್ ಪೇಟೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಪತಿ ಹಳಗುಂದ ಪುಸ್ತಕ ಕುರಿತು ಮಾತನಾಡುವರು. ಪ್ರಕಾಶಕ ಬಿ.ಮಂಜುನಾಥ್,  ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಡಿ.ಆರ್.ರೇಖಾ ಉಮೇಶ್ ಉಪಸ್ಥಿತರಿರುವರು ಎಂದರು.

ಲೇಖಕ ಸಂತೇಬೆನ್ನೂರು ಲೋಕೇಶ್ ಮಾತನಾಡಿ, ಇದೊಂದು ಪೌರಾಣಿಕ ಕಾದಂಬರಿ. ಭಗೀರಥ ದರ್ಶನ ಉಪ್ಪಾರ ಸಮಾಜದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಪೌರಾಣಿಕ ಲೇಖನಗಳು, ಗ್ರಂಥಗಳು ಕಾದಂಬರಿಗೆ ಪ್ರೇರಣೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್‌ ನಾಗರಾಜ್ ಕಂಕಾರಿ, ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ನಗರ ಪಾಲಿಕೆ ಮಾಜಿ ಸದಸ್ಯ ಎಲ್.ಮಂಜುನಾಥ್, ಹಾರನಹಳ್ಳಿ ರವಿ, ಲೋಕೇಶ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು