ಬುಧವಾರ, ಜುಲೈ 6, 2022
21 °C

ಬೀದರ್‌: ₹ 1.40 ಲಕ್ಷ ಮೌಲ್ಯದ ಗಾಂಜಾ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ತಾಲ್ಲೂಕಿನ ಮನ್ನಳ್ಳಿ ಗ್ರಾಮ ವ್ಯಾಪ್ತಿಯ ಸಿಂಧೋಲ್‌ ಕ್ರಾಸ್‌ ಬಳಿ ಭಾನುವಾರ ಅಬಕಾರಿ ಇಲಾಖೆಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ₹ 1.40 ಲಕ್ಷ ಮೌಲ್ಯದ ಗಾಂಜಾ ವಶ ಪಡಿಸಿಕೊಂಡಿದ್ದಾರೆ.

ಆರೋಪಿ ಸಂಜೀವಕುಮಾರ ಮೇಘನಾಥ ಚವಾಣ್‌ ಹಾಗೂ ಇನ್ನೊಬ್ಬ ಹೊಂಡಾ ಆ್ಯಕ್ಟಿವ್‌ದಲ್ಲಿ ಪಾಕೆಟ್‌ಗಳಲ್ಲಿ ಒಣ ಗಾಂಜಾ ಸಾಗಿಸುತ್ತಿದ್ದರು. ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸಂಜೀವಕುಮಾರ ಚವಾಣ್‌ನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಪರಾರಿಯಾಗಿದ್ದಾನೆ.

ಅಬಕಾರಿ ಅಧಿಕಾರಿ ಆನಂದ ಉಕ್ಕಲಿ, ರವೀಂದ್ರ ಪಾಟೀಲ, ಸುರೇಶ ಶಂಕರ, ದಿಲೀಪ್‌ ಸಿಂಗ್, ಸಿಬ್ಬಂದಿ ವಿಷ್ಣು, ಟೋನಿ, ಅತೀಕ್ ದಾಳಿಯಲ್ಲಿ ಭಾಗವಹಿಸಿದ್ದರು. ಅಬಕಾರಿ ಪಿಎಸ್‌ಐ ನರೇಂದ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು