ಮಂಗಳವಾರ, ಜೂನ್ 22, 2021
26 °C
ಸಾವಿರ ಸಮೀಪಿಸುತ್ತಿರುವ ವೈರಾಣು ಪೀಡಿತರ ಸಂಖ್ಯೆ

ಬೀದರ್: 119 ಜನರಿಗೆ ಕೋವಿಡ್ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲೆಯಲ್ಲಿ ಭಾನುವಾರ 119 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ.

ಬೀದರ್ ತಾಲ್ಲೂಕಿನಲ್ಲಿ ಅತಿ ಹೆಚ್ಚು 42 ಜನರಿಗೆ ಸೋಂಕು ತಗುಲಿದೆ. ಭಾಲ್ಕಿ ತಾಲ್ಲೂಕಿನಲ್ಲಿ 34, ಔರಾದ್‌ ತಾಲ್ಲೂಕಿನಲ್ಲಿ 17, ಹುಮನಾಬಾದ್‌ ತಾಲ್ಲೂಕಿನಲ್ಲಿ 14 ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲಿ 9 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ 57,069 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. 960 ಕೋವಿಡ್‌ ಪ್ರಕರಣಗಳು ಸಕ್ರೀಯವಾಗಿವೆ. ಕೋವಿಡ್ ಸೋಂಕಿತರ ಸಂಖ್ಯೆ 3,577ಕ್ಕೆ ತಲುಪಿದೆ. 53,001 ಮಂದಿಯ ವರದಿ ನೆಗೆಟಿವ್‌ ಬಂದಿದೆ. ಇನ್ನೂ 491 ಮಂದಿಯ ವರದಿ ಬರಬೇಕಿದೆ.

ಒಟ್ಟು 2505 ಜನರು ಗುಣಮುಖರಾಗಿದ್ದಾರೆ. ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಕೋವಿಡ್ ಆಸ್ಪತ್ರೆಯಿಂದ ಭಾನುವಾರ 71 ಮಂದಿ ಬಿಡುಗಡೆ ಹೊಂದಿದ್ದಾರೆ.

ಇಂದಿನ ಸೋಂಕಿತರ ಸಂಖ್ಯೆ–119
ಇಂದು ಆಸ್ಪತ್ರೆಯಿಂದ ಬಿಡುಗಡೆ–71
ಇಂದು ಮೃತಪಟ್ಟವರು–1
ಕೋವಿಡ್ 19 ಸಕ್ರೀಯ ಪ್ರಕರಣ– 960
ಒಟ್ಟು ಕೋವಿಡ್ 19 ಪಾಸಿಟಿವ್– 3577
ಗುಣಮುಖರಾದವರ ಸಂಖ್ಯೆ– 2505
ಈವರೆಗೆ ಮೃತಪಟ್ಟವರ ಸಂಖ್ಯೆ–108

ತಪಾಸಣೆಗೊಳಪಡಿಸಿದ ಮಾದರಿಗಳು– 57,069
ಬರಬೇಕಿರುವ ವರದಿಗಳು– 491
ನೆಗೆಟಿವ್ ಫಲಿತಾಂಶ– 53,001
.....................................................
ಕೋವಿಡ್‌ ಸೋಂಕಿತರ ವಿವರ
.................................................
ತಾಲ್ಲೂಕು– ಇಂದಿನ ಸೋಂಕಿತರು– ಒಟ್ಟು
ಔರಾದ್ –17 –531
ಬಸವಕಲ್ಯಾಣ –9 –561
ಭಾಲ್ಕಿ –34 –516
ಬೀದರ್ –42 –1267
ಹುಮನಾಬಾದ್ –14 – 680
ಹೊರ ರಾಜ್ಯ –3– 22
...............................................
ಒಟ್ಟು –119– 3577

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು