ಮಂಗಳವಾರ, ಸೆಪ್ಟೆಂಬರ್ 29, 2020
22 °C

ಬ್ಯಾಂಕ್ ನಾಮಫಲಕ ಕುಸಿದು ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ಮಂಠಾಳದಲ್ಲಿ ಭಾನುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಬ್ಯಾಂಕ್‌ನ ಪ್ರವೇಶದ್ವಾರದ ಛಾವಣಿ ಮತ್ತು ಸಿಮೆಂಟ್‌ನ ನಾಮಫಲಕ ಕುಸಿದು ಒಬ್ಬ ಬಾಲಕ ಮೃತಪಟ್ಟು, ಮೂವರು ಬಾಲಕರಿಗೆ ಗಾಯಗಳಾಗಿವೆ. ಪ್ರಜ್ವಲ್ ಕೊರವ (11) ಎಂಬಾತ ಮೃತಪಟ್ಟಿದ್ದು, ದಿನೇಶ, ಚರಣ ಮತ್ತು ಆಕಾಶ ಎಂಬುವರಿಗೆ ಗಾಯಗಳಾಗಿವೆ.

‘ಪಿಕೆಪಿಎಸ್ ಬ್ಯಾಂಕ್ ಕಟ್ಟಡ 40 ವರ್ಷಗಳದಷ್ಟು ಹಳೆಯದು. ನಾಲ್ವರು ಬಾಲಕರು ಕಟ್ಟೆಯ ಮೇಲೆ ಆಟವಾಡುತ್ತಿದ್ದ ವೇಳೆ ಸಿಮೆಂಟ್ ನಾಮಫಲಕ ಕುಸಿದಿದೆ. ಗಾಯಗೊಂಡಿರುವ ಮೂವರು ಬಾಲಕರು ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕರ ಮನೆಗಳು ಸಮೀಪದಲ್ಲೇ ಇದ್ದು, ಬ್ಯಾಂಕ್‌ಗೆ ರಜೆ ಇದ್ದ ಕಾರಣ ಮಕ್ಕಳು ಆಡವಾಡುತ್ತಿದ್ದರು’ ಎಂದು ಮಂಠಾಳ ಠಾಣೆಯ ಪೊಲೀಸರು ತಿಳಿಸಿದ್ದಾರೆ.

‘ನಾಮಫಲಕವಿರುವ ಸ್ಥಳದಲ್ಲಿನ ಛಾವಣಿ ಮಾತ್ರ ಕುಸಿದಿದೆ. ಕಟ್ಟಡದ ಇತರೆ ಭಾಗಕ್ಕೆ ಹಾನಿ ಆಗಿಲ್ಲ’ ಎಂದು ಬ್ಯಾಂಕ್‌ನ ಕಾರ್ಯದರ್ಶಿ ಶಿವಪುತ್ರಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.