ಬೀದರ್: ₹ 7.20 ಲಕ್ಷ ಮೌಲ್ಯದ 14 ಮೋಟರ್ ಬೈಕ್ ವಶ

ಬೀದರ್: ಬಗದಲ್ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ₹ 7.20 ಲಕ್ಷ ಮೌಲ್ಯದ 14 ಮೋಟರ್ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್ ತಿಳಿಸಿದರು.
ಬಗದಲ್ ಪೊಲೀಸರು ಬೀದರ್ ಜಿಲ್ಲೆ ಹಾಗೂ ನೆರೆಯ ತೆಲಂಗಾಣದ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ ಪ್ರಕರಣಗಳನ್ನೂ ಪತ್ತೆ ಮಾಡಿದ್ದಾರೆ ಎಂದು ನಗರದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರೋಪಿಗಳು ರಸ್ತೆ ಬದಿಗೆ ನಿಲ್ಲಿಸುತ್ತಿದ್ದ ವಾಹನಗಳನ್ನೇ ಕದಿಯುತ್ತಿದ್ದರು. ಬೀದರ್ ಉಪ ವಿಭಾಗದಲ್ಲಿ 5, ನೆರೆಯ ತೆಲಂಗಾಣದ ಜಹೀರಾಬಾದ್‌ನಲ್ಲಿ 1 ಹಾಗೂ ಹೈದರಾಬಾದ್‌ನಲ್ಲಿ 8 ಬೈಕ್‌ಗಳನ್ನು ಕದ್ದಿದ್ದರು. ಆರೋಪಿಗಳು 22ರಿಂದ 25 ವರ್ಷನವರು. ಎಲ್ಲರೂ ಬೀದರ್‌ನವರೇ ಆಗಿದ್ದಾರೆ ಎಂದು ಹೇಳಿದರು.
ಬೀದರ್ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರೆ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಸುವರ್ಣಾ, ಶಶಿಕಲಾ, ಸಂತೋಷ ತಾವರಖೇಡ, ಸಿಬ್ಬಂದಿ ನೀಲಕಂಠ, ರವಿಕಾಂತ, ಅಶೋಕ ಕೋಟೆ, ಅಶೋಕ ಯಾದವ, ಅಶೋಕ, ಪ್ರಶಾಂತ, ಮಾಳಪ್ಪ, ಜಗಧೀಶ ರೆಡ್ಡಿ, ಸಂಜುಕುಮಾರ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್, ಡಿವೈಎಸ್‌ಪಿ ಸತೀಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.