ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ನಗರದಲ್ಲಿ 27 ಪಟಾಕಿ ಮಳಿಗೆಗಳು

Last Updated 3 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಬೀದರ್‌: ಕೋವಿಡ್‌ನಿಂದಾಗಿ ಸಂಭ್ರಮ ಕಳೆದುಕೊಂಡಿದ್ದ ಹಬ್ಬ ಮತ್ತೆ ಮೆರುಗು ಪಡೆದುಕೊಳ್ಳುತ್ತಿದೆ. ಪಟಾಕಿಗಳ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಲು ನಗರದ ಸಾಯಿ ಆದರ್ಶ ಶಾಲೆಯ ಮೈದಾನದಲ್ಲಿ 27 ಪಟಾಕಿ ಅಂಗಡಿಗಳು ತೆರೆದುಕೊಂಡಿವೆ.
ಸಣ್ಣ ಪಟಾಕಿಗಳಿಂದ ಹಿಡಿದು ದೊಡ್ಡ ಪಟಾಕಿಗಳು ಕನಿಷ್ಠ ₹ 30ರಿಂದ ₹ 2 ಸಾವಿರ ವರೆಗೂ ಮಾರಾಟಕ್ಕೆ ಇವೆ.
ಮಕ್ಕಳು ಸಿಡಿಸುವ ಪಟಾಕಿಗಳಿಗೆ ಬೇಡಿಕೆ ಹೆಚ್ಚಿದೆ. ಸುರ್‌ ಸುರ್ ಬತ್ತಿ, ನೆಲದ ಮೇಲೆ ಬೆಂಕಿ ಚೆಲ್ಲುತ್ತ ತಿರುಗುವ ಚಕ್ರಗಳು ಹೆಚ್ಚು ಮಾರಾಟವಾಗುತ್ತಿವೆ. ಅಂಗಡಿ ಮಾಲೀಕರು ಒಂದಿಷ್ಟು ರಿಯಾಯಿತಿ ಘೋಷಿಸಿ ಬಾಕ್ಸ್‌ ರೂಪದಲ್ಲಿ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದಾರೆ.

‘ಮೈನಡಗುವಂತೆ ಅಬ್ಬರದ ಶಬ್ದ ಮಾಡುತ್ತಿದ್ದ ಲಕ್ಷ್ಮಿಬಾಂಬ್‌ ಹಾಗೂ ಈರುಳ್ಳಿ ಪಟಾಕಿ ನಿಷೇಧಿಸಲಾಗಿದೆ. ಶಿವಕಾಶಿಯಲ್ಲಿ ಪಟಾಕಿಗಳ ಕಾರ್ಖಾನೆಗಳು ಅತಿವೃಷ್ಟಿಯಿಂದ ಹಾನಿಗೊಳಗಾಗಿವೆ. ಈ ಬಾರಿ ಹೆಚ್ಚು ಹೊಸ ಪಟಾಕಿಗಳು ಮಾರುಕಟ್ಟೆಗೆ ಬಂದಿಲ್ಲ. ಆದರೆ, ಮಕ್ಕಳು ಹಾರಿಸಬಹುದಾದ ಎಲ್ಲ ಬಗೆಯ ಪಟಾಕಿಗಳು ಇವೆ’ ಎಂದು ಸಂಗಮೇಶ್ವರ ಕ್ರ್ಯಾಕರ್ಸ್ ಅಂಗಡಿ ಮಾಲೀಕ ಮಲ್ಲಿಕಾರ್ಜುನ ತಿಳಿಸಿದರು.

ಕೋವಿಡ್‌ ಕಾರಣ ಆದಾಯ ಕಡಿಮೆ ಇದೆ. ಜನ ಹೆಚ್ಚು ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಪಟಾಕಿ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಸುರ್‌ಸುರ್‌ಬತ್ತಿ ₹ 15ರಿಂದ ₹ 25, ಹೂಬಾಣ ₹ 30 ರಿಂದ ₹40, ಬತ್ತಿ ಪಟಾಕಿ ₹ 15 ರಿದ ₹20, ರಾಕೇಟ್‌ ₹ 60ರಿಂದ ₹70 ಹಾಗೂ ಚಕ್ರದ ಚಿಕ್ಕ ಬಾಕ್ಸ್ ಬೆಲೆ ₹ 30 ರಿಂದ ₹ 70 ಇದೆ. ಗಾತ್ರಕ್ಕೆ ಅನುಗುಣವಾದ ಬೆಲೆಯಲ್ಲಿ ಪಟಾಕಿಗಳು ಮಾರಾಟಕ್ಕೆ ಲಭ್ಯ ಇವೆ’ ಎಂದು ಶಿವಂ ಕ್ರ್ಯಾಕರ್ಸ್ ಮಾಲೀಕ ಪ್ರಭುಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT