ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ | ಬಸ್ ಚಕ್ರದಡಿ ಸಿಲುಕಿ 5 ವರ್ಷದ ಬಾಲಕ ಸಾವು

Published 22 ಆಗಸ್ಟ್ 2024, 16:00 IST
Last Updated 22 ಆಗಸ್ಟ್ 2024, 16:00 IST
ಅಕ್ಷರ ಗಾತ್ರ

ಹುಲಸೂರ: ‘ಅಂಬೆವಾಡಿಯಿಂದ ಮಿರಖಲ್‌ ಕಡೆಗೆ ಚಲಿಸುತ್ತಿದ್ದ ಸಾರಿಗೆ ಇಲಾಖೆ ಬಸ್ ಹಿಂದಿನ ಚಕ್ರದ ಅಡಿಗೆ ಸಿಲುಕಿ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಮಿರಖಲ ಗ್ರಾಮದ ಮುಖ್ಯ ರಸ್ತೆಯ ಬಳಿ ಗುರುವಾರ ನಡೆದಿದೆ.

ತಾಲ್ಲೂಕಿನ ಮಿರಖಲ ನಿವಾಸಿ ಗಣೇಶ ಲಕ್ಷ್ಮಣ(5) ಮೃತ ಬಾಲಕ. ಮೃತಪಟ್ಟ ಬಾಲಕನ ತಾಯಿಗೆ ಹೆರಿಗೆ ಆಗಿದ್ದರಿಂದ ಅವರು, ತವರು ಮನೆಯಲ್ಲಿ ವಾಸವಾಗಿದ್ದರು. ಗುರುವಾರ ಬೆಳಿಗ್ಗೆ ಬಾಲಕ ತನ್ನ ತಾಯಿಯೊಂದಿಗೆ ಅಂಬೆವಾಡಿ-ಮಿರಖಲ ರಸ್ತೆ ಬದಿ ಬಯಲು ಬಹಿರ್ದೆಸೆಗೆಂದು ತೆರಳಿದ್ದರು. ಈ ವೇಳೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗಿದ್ದು, ಬಾಲಕ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಿದ್ದರೂ, ಚಿಕಿತ್ಸೆಗೆ ಸ್ಪಂದಿಸದೇ ಮತೃಪಟ್ಟಿದ್ದಾನೆ’ ಎಂದು ದೂರುದಾರರು ಉಲ್ಲೇಖಿಸಿದ್ದಾರೆ ಎಂದು ಪಿಎಸ್ಐ ಶಿವಪ್ಪ ಮೇಟಿ ‘ಪ್ರಜಾವಾಣಿ’ ತಿಳಿಸಿದ್ದಾರೆ.

ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕರನ್ನು ವಶಕ್ಕೆ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT