ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌|ಮೂರು ಕಡೆ ದಾಳಿ; 71 ಸಿಲಿಂಡರ್‌ ಜಪ್ತಿ

ಗೃಹ ಉಪಯೋಗಿ ಸಿಲಿಂಡರ್‌ ವಾಣಿಜ್ಯಕ್ಕೆ ಬಳಸಿದರೆ ಕ್ರಮದ ಎಚ್ಚರಿಕೆ
Published 18 ಜುಲೈ 2023, 15:33 IST
Last Updated 18 ಜುಲೈ 2023, 15:33 IST
ಅಕ್ಷರ ಗಾತ್ರ

ಬೀದರ್‌: ಆಹಾರ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 71 ಗೃಹ ಉಪಯೋಗಿ ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬೀದರ್‌ ನಗರದ ಮೈಲೂರ ಸಿಎಂಸಿ ಕಾಲೊನಿಯಲ್ಲಿ 6, ಭಾಲ್ಕಿಯಲ್ಲಿ 65 ಸಿಲಿಂಡರ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. 

ಆಹಾರ ಇಲಾಖೆಯ ಇನ್‌ಸ್ಪೆಕ್ಟರ್‌ ನಾಗರಾಜ, ಗಾಂಧಿ ಗಂಜ್‌ ಪೊಲೀಸ್‌ ಠಾಣೆಯ ಪಿಎಸ್‌ಐ ಸೈಯದ್‌ ಪಟೇಲ್‌ ನೇತೃತ್ವದಲ್ಲಿ ಮೈಲೂರಿನ ಮನೆಯೊಂದರ ಮೇಲೆ ದಾಳಿ ನಡೆಸಿ 6 ಸಿಲಿಂಡರ್‌ ಜಪ್ತಿ ಮಾಡಿದ್ದಾರೆ. 

ಆಹಾರ ಇಲಾಖೆಯ ಇನ್‌ಸ್ಪೆಕ್ಟರ್‌ ರಾಜೇಂದ್ರಕುಮಾರ, ಪಟ್ಟಣ ಠಾಣೆಯ ಪಿಎಸ್‌ಐ ರಮೇಶ ಟೋಕರೆ ನೇತೃತ್ವದಲ್ಲಿ ಸಿಬ್ಬಂದಿ ಭಾಲ್ಕಿ ಪಟ್ಟಣದ ಬೀದರ್‌ ರಸ್ತೆಯಲ್ಲಿ ಅನಧಿಕೃತವಾಗಿ ಹೆಚ್ಚಿನ ಬೆಲೆಗೆ ಗ್ಯಾಸ್‌ ಸಿಲಿಂಡರ್‌ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಒಟ್ಟು 27 ಗೃಹಬಳಕೆ, 4 ವಾಣಿಜ್ಯ ಬಳಕೆ, ಒಂದು ತೂಕದ ಯಂತ್ರ, ಗ್ಯಾಸ್‌ ತುಂಬುವ ಮೋಟಾರ್‌ ಜಪ್ತಿ ಮಾಡಿದ್ದಾರೆ. 

ಭಾಲ್ಕಿ ತಾಲ್ಲೂಕಿನ ಉಚ್ಚಾ ಗ್ರಾಮದಲ್ಲಿ ಸೋಮವಾರ ಆಹಾರ ಇಲಾಖೆಯ ಶಿರಸ್ತೇದಾರ ವೆಂಕಟರಾವ ಬಿರಾದಾರ, ಖಟಕಚಿಂಚೋಳಿ ಠಾಣೆ ಪಿಎಸ್‌ಐ ಶಕಲೇಶ್‌ ಪಟೇಲ್‌ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, 34 ಸಿಲಿಂಡರ್‌ ಜಪ್ತಿ ಮಾಡಿ, ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

‘ಜಿಲ್ಲೆಯ ಯಾವುದೇ ಭಾಗದಲ್ಲಿ ಗೃಹಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಡುವುದಾಗಲಿ, ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡುವುದಾಗಲಿ ಕಂಡು ಬಂದಲ್ಲಿ ಅಥವಾ ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಗೃಹಬಳಕೆಯ ಸಿಲಿಂಡರ್‌ ಉಪಯೋಗಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಗ್ಯಾಸ್‌ ಏಜೆನ್ಸಿಯವರು ಇಂತಹ ಪ್ರಕರಣಗಳಲ್ಲಿ ಶಾಮೀಲಾದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸುರೇಖಾ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT