ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳಲ್ಲಿ ಮೂಢನಂಬಿಕೆಗೆ ವಿರೋಧ: ಡಾ.ಬಾಬುರಾವ್ ಚಿಮಕೋಡ ಅಭಿಪ್ರಾಯ

ಸಮ್ಮೇಳನದ ವಚನ ಚಿಂತನಗೊಷ್ಠಿ
Last Updated 2 ಫೆಬ್ರುವರಿ 2019, 13:43 IST
ಅಕ್ಷರ ಗಾತ್ರ

ಬಸವಕಲ್ಯಾಣ: `ವಚನಸಾಹಿತ್ಯದಲ್ಲಿ ಮೂಢನಂಬಿಕೆಗೆ ಪ್ರಬಲವಾಗಿ ವಿರೋಧಿಸಲಾಗಿದೆ' ಎಂದು ಸಾಹಿತಿ ಡಾ.ಬಾಬುರಾವ್ ಚಿಮಕೋಡ ಹೇಳಿದರು.

ತಾಲ್ಲೂಕಿನ ಸಸ್ತಾಪುರದಲ್ಲಿ ಶನಿವಾರ ಯಲ್ಲಾಲಿಂಗೇಶ್ವರ 33ನೇ ಪುಣ್ಯಸ್ಮರಣೆ ಅಂಗವಾಗಿ ನಡೆದ ಜಿಲ್ಲಾ 7ನೇ ಆಧುನಿಕ ವಚನ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಆಧುನಿಕ ವಚನ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಬಸವಾದಿ ಶರಣರು ಕೀರ್ತಿಪತಾಕೆ ಹಾರಿಸುವುದಕ್ಕಾಗಿ ವಚನಗಳನ್ನು ರಚಿಸಿಲ್ಲ. ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಅವರ ಮುಖ್ಯ ಧ್ಯೇಯವಾಗಿತ್ತು. ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಎಂದು ಅವರು ಹೇಳಿದ್ದರೂ ಇಂದಿಗೂ ಜನ ಮಂತ್ರ, ತಂತ್ರ ನಂಬುವುದನ್ನು ಬಿಟ್ಟಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ದೇಶಾಂಶ ಹುಡಗಿ ಮಾತನಾಡಿ, `ವಚನ ಮತ್ತಿತರೆ ಸಾಹಿತ್ಯ ತಿದ್ದುವ ಅಧಿಕಾರ ಮೂಲ ಬರಹಗಾರರಿಗೆ ಬಿಟ್ಟರೆ ಅನ್ಯರಿಗೆ ಇಲ್ಲ. ಆದರೂ, ಬಸವಣ್ಣ ಹಾಗೂ ಇತರರ ವಚನಗಳನ್ನು ಕೆಲವರು ತಿದ್ದುಪಡಿ ಮಾಡಿದ್ದು ಖಂಡನೀಯವಾಗಿದೆ' ಎಂದರು.

ಭೀಮಶೇನ್ ಗಾಯಕವಾಡ ಅವರು, ‘ಆಧುನಿಕ ವಚನಗಳಲ್ಲಿ ದಲಿತ ಪ್ರಜ್ಞೆ’ ವಿಷಯದ ಕುರಿತು ಮಾತನಾಡಿ, `ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಪ್ರೇರಣೆ ಪಡೆದು ದಲಿತ ಬಂಡಾಯ ಸಾಹಿತ್ಯ ಹುಟ್ಟಿಕೊಂಡಿತ್ತು. ಆಧುನಿಕ ವಚನಗಳಲ್ಲಿಯೂ ದಲಿತರ ಬೇಕು ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಲಾಗುತ್ತಿದೆ' ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಮಾಣಿಕರಾವ್ ಬಿರಾದಾರ, ಡಾ.ರಘುಶಂಖ ಭಾತಂಬ್ರಾ, ಡಾ.ಜಯದೇವಿ ಗಾಯಕವಾಡ, ಡಾ.ಗವಿಸಿದ್ದಪ್ಪ ಪಾಟೀಲ ಮಾತನಾಡಿದರು.

ವಿಜಯಕುಮಾರ ಚಿದ್ರಿ ಉದ್ಘಾಟಿಸಿದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕೇಶಪ್ಪ ಬಿರಾದಾರ, ಮಾತೆ ಮಹಾದೇವಿತಾಯಿ, ಸಂಜೀವಕುಮಾರ ಅತಿವಾಳೆ, ಸಾಕ್ಷರತಾ ಸಂಯೋಜಕ ಚನ್ನವೀರ ಜಮಾದಾರ, ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ, ಬಸವರಾಜ ಸಿರಿಗೆರೆ, ರಾಜಮತಿ ಕೋರಾಳೆ, ಸುರೇಖಾ ಜ್ಯೋತೆಪ್ಪ, ಕಾಶಿನಾಥ ಬಿರಾದಾರ, ಬಾಲಾಜಿರೆಡ್ಡಿ, ಬಾಬುರೆಡ್ಡಿ, ಹಣಮಂತ ಇಲ್ಲಾಳ, ಅನಿಲಕುಮಾರ ಮರ್ಪಳ್ಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT