ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಭಕ್ತರ ಯಾತ್ರೆಗೆ ಅದ್ಧೂರಿ ಸ್ವಾಗತ

ಹವಾ ಮಲ್ಲಿನಾಥ ಮಹಾರಾಜರ ನೇತೃತ್ವ
Last Updated 28 ಮಾರ್ಚ್ 2023, 15:16 IST
ಅಕ್ಷರ ಗಾತ್ರ

ಬೀದರ್: ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದ ದೇಶ ಭಕ್ತರ ಯಾತ್ರೆಗೆ ನಗರದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.

ಅಮರ ಬಲಿದಾನ ದಿನಾಚರಣೆ ಅಂಗವಾಗಿ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಿಂದ ಆರಂಭಗೊಂಡು ವಿವಿಧ ರಾಜ್ಯಗಳಲ್ಲಿ ಸಂಚರಿಸಿ ನಗರಕ್ಕೆ ಬಂದ ಯಾತ್ರೆಗೆ ಪುಷ್ಪವೃಷ್ಟಿ ಮಾಡಿ, ಜಯ ಘೋಷದೊಂದಿಗೆ ಹೃದಯ ಸ್ಪರ್ಶಿ ಸ್ವಾಗತ ಕೋರಲಾಯಿತು.
ಭಾರತ ಮಾತೆ, ಹವಾ ಮಲ್ಲಿನಾಥ ಮಹಾರಾಜರಿಗೆ ಜಯಕಾರದ ಘೋಷಣೆ ಹಾಕಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕ್ರೇನ್ ಮೂಲಕ ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಹವಾ ಮಲ್ಲಿನಾಥ ಮಹಾರಾಜರಿಗೆ ಬೃಹತ್ ಮಾಲೆ ಹಾಕಿ ಗೌರವಿಸಲಾಯಿತು.

ನಗರದ ಹೊರವಲಯದ ಭಾವಲಿಂಗ ಮಲ್ಲಿನಾಥ ಆಶ್ರಮದಿಂದ ಬಸವೇಶ್ವರ ವೃತ್ತ, ಭಗತ್‍ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ನೆಹರೂ ಕ್ರೀಡಾಂಗಣ, ಮಡಿವಾಳ ವೃತ್ತ, ಹೊಸ ಬಸ್ ನಿಲ್ದಾಣ, ಶಿವನಗರ, ನೌಬಾದ್ ಮಾರ್ಗವಾಗಿ ಯಾತ್ರೆ ಔದುಂಬರ ಲಿಂಗ ಆಶ್ರಮಕ್ಕೆ ತಲುಪಿಸಿತು.

ಪ್ರಮುಖರಾದ ಮಾರುತಿ ಬೌದ್ಧೆ, ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾಜಾಪುರ, ಶಶಿಕಾಂತ ಪಾಟೀಲ, ವೈಜಿನಾಥ ಪಾಟೀಲ, ಪ್ರಕಾಶ ಝಲ್ಕೆ, ಪ್ರಕಾಶ ಕೊಳಾರ, ಫರ್ನಾಂಡೀಸ್ ಹಿಪ್ಪಳಗಾಂವ್, ನಾಗೇಶ ಹೊಸದೊಡ್ಡಿ, ನಿಲೇಶ್, ರಾಹುಲ್ ಶಂಕರ, ಮಹೇಶ ಗೋರನಾಳಕರ್, ಶಿವಕುಮಾರ ಮದನೂರ, ಆಕಾಶ ಜನವಾಡ, ಶಿವು, ವಿಶ್ವ ಕೊಳಾರ, ಮಲ್ಲು ಕೊಳಾರ, ವೀರಶೆಟ್ಟಿ ಕೊಳಾರ, ಮಲ್ಲು ಸಾರವಾಡ, ಅಶ್ವಿನ್ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT