ಶುಕ್ರವಾರ, ಸೆಪ್ಟೆಂಬರ್ 25, 2020
21 °C

ನಟ ಸುದೀಪ್ 47ನೇ ಜನ್ಮದಿನ : ಬಟ್ಟೆ, ಆಹಾರಧಾನ್ಯ ಕಿಟ್ ಉಚಿತ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಚಿತ್ರನಟ ಸುದೀಪ್ ಅವರ 47ನೇ ಜನ್ಮದಿನದ ಪ್ರಯುಕ್ತ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗದಿಂದ ನಗರದ ಮಹಾತ್ಮ ಜ್ಯೋತಿಬಾ ಫುಲೆ ವೃದ್ಧಾಶ್ರಮದಲ್ಲಿ ಇರುವ ಹಿರಿಯ ನಾಗರಿಕರಿಗೆ ಬಟ್ಟೆ, ಆಹಾರಧಾನ್ಯ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಚಿತವಾಗಿ ವಿತರಿಸಲಾಯಿತು.

ಜೆಡಿಎಸ್ ಎಸ್‍ಸಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ದೇವೇಂದ್ರ ಸೋನಿ ಮಾತನಾಡಿ, ಹಿರಿಯ ನಾಗರಿಕರು, ಬಡವರು, ನಿರ್ಗತಿಕರು, ಅನಾಥರಿಗೆ ನೆರವಾಗುವ ಮೂಲಕ ಸುದೀಪ್ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗದ ಬಸವರಾಜ ಶಿವಪುರೆ ಮಾತನಾಡಿ, ಸುದೀಪ್ ಅವರು ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಬೇಕು ಎಂದು ಕರೆ ಕೊಟ್ಟಿದ್ದರು. ಅವರ ಆಶಯದಂತೆ ಹಲವರಿಗೆ ನೆರವು ಒದಗಿಸಲಾಗಿದೆ ಎಂದು ತಿಳಿಸಿದರು.

ರಜನೀಶ್ ಮದಳೆ, ಡಾ. ಬಿ.ಆರ್. ಅಂಬೇಡ್ಕರ್ ಕಲ್ಚರಲ್ ಆ್ಯಂಡ್ ವೆಲ್‍ಫೇರ್ ಸೊಸೈಟಿ ಸಂಚಾಲಿತ ಮಹಾತ್ಮ ಜ್ಯೋತಿಬಾ ಫುಲೆ ವೃದ್ಧಾಶ್ರಮದ ಮೇಲ್ವಿಚಾರಕ ಬಾಲಾಜಿ ಮಾತನಾಡಿದರು.

ಆಕಾಶ ಸೋನಿ ಚಿದ್ರಿ, ಸುನೀಲ್ ಚಿದ್ರಿ, ಅಂಕುಶ ನಿಜಾಂಪುರ, ವಿಕ್ಕಿ ಕಿಚ್ಚ, ಅರುಣ, ಅಮೀತ್, ಚಂದು, ರಮೇಶ, ಸಂಗು, ವಿಶಾಲ ಚಿದ್ರಿ, ಪವನ, ಗಂಗಾಧರ, ನಾಗೇಶ, ಸತ್ಯ ಸಾವಿತ್ರಿ, ಸುಭಾಷ ರೆಡ್ಡಿ, ಸಚಿನ್, ಶಿವಕುಮಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.