ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ಉದ್ಯೋಗಕ್ಕೆ ನೆರವಾಗುವ ‘ಕೃಷಿ ಡಿಪ್ಲೊಮಾ’

ಕೃಷಿಕರ ಮಕ್ಕಳಿಗೆ ಶೇ 50 ಸ್ಥಾನಗಳು ಮೀಸಲು
Published 24 ಮೇ 2023, 19:30 IST
Last Updated 24 ಮೇ 2023, 19:30 IST
ಅಕ್ಷರ ಗಾತ್ರ

ಜನವಾಡ: ಕೃಷಿ ಡಿಪ್ಲೊಮಾ ತ್ವರಿತ ಉದ್ಯೋಗಕ್ಕೆ ನೆರವಾಗುವ ಕೋರ್ಸ್‍ಗಳಲ್ಲಿ ಒಂದು. ಎರಡೇ ವರ್ಷಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವುದು ಇದರ ವಿಶೇಷ. ಜತೆಗೆ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಯಶಸ್ಸು ಗಳಿಸಲೂ ಅವಕಾಶ ಇದೆ.

ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಡಿಯ ಕೃಷಿ ಡಿಪ್ಲೊಮಾ ವಿದ್ಯಾಲಯ ಇದೆ. ಎಸ್ಸೆಸ್ಸೆಲ್ಸಿ ತೇರ್ಗಡೆಯಾದವರು ಕನ್ನಡ ಮಾಧ್ಯಮದ ನಾಲ್ಕು ಸೆಮಿಸ್ಟರ್‍ಗಳ ಕೋರ್ಸ್‍ಗೆ ಪ್ರವೇಶ ಪಡೆಯಬಹುದು.

ಕೃಷಿ ಡಿಪ್ಲೊಮಾ ಪೂರೈಸಿದವರಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಕ್ಷೇತ್ರ ಸಹಾಯಕ, ಖಾಸಗಿ ರಸಗೊಬ್ಬರ, ಬೀಜ, ಔಷಧ ಕಂಪನಿಗಳಲ್ಲಿ ಉದ್ಯೋಗ ಲಭಿಸಲಿದೆ. ಬೀಜ ವಿತರಣಾ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಅವಕಾಶ ಇದೆ. ರಸಗೊಬ್ಬರ, ಔಷಧ ಅಂಗಡಿ ಪರವಾನಗಿ ದೊರಕಲಿದೆ. ಇವುಗಳಲ್ಲದೆ, ಇನ್ನೂ ಅನೇಕ ಅವಕಾಶಗಳು ಇವೆ.

ಕೃಷಿ ಡಿಪ್ಲೊಮಾ ಕೃಷಿಕರ ಮಕ್ಕಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಆರಂಭಿಸಿದ ಕೋರ್ಸ್ ಆಗಿದೆ. ಪ್ರತಿ ಸೆಮಿಸ್ಟರ್‍ಗೆ ರೂ. 4 ಸಾವಿರದಿಂದ ರೂ. 6 ಸಾವಿರ ಶುಲ್ಕವಷ್ಟೇ ಇದೆ. 50 ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ ಎಂದು ಕೃಷಿ ಡಿಪ್ಲೊಮಾ ವಿದ್ಯಾಲಯದ ಸಂಯೋಜಕ ಡಾ. ಆರ್.ಎಲ್. ಜಾಧವ್ ತಿಳಿಸುತ್ತಾರೆ.

ಪ್ರಸಕ್ತ ವರ್ಷ ಸೀಟುಗಳ ಸಂಖ್ಯೆ 75 ಇಲ್ಲವೇ 100ಕ್ಕೆ ಹೆಚ್ಚಳ ಮಾಡುವ ಕುರಿತು ವಿಶ್ವವಿದ್ಯಾಲಯ ಮಟ್ಟದಲ್ಲಿ ಚಿಂತನೆ ನಡೆದಿದೆ. ಜೂನ್ ಅಥವಾ ಜುಲೈನಲ್ಲಿ ಪ್ರವೇಶ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳುತ್ತಾರೆ.

ಎಸ್ಸೆಸ್ಸೆಲ್ಸಿ ಪಾಸಾದವರು ಕೃಷಿ ಡಿಪ್ಲೊಮಾ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ರೈತರ ಮಕ್ಕಳಿಗೆ ಶೇ 50 ರಷ್ಟು ಸ್ಥಾನಗಳು ಮೀಸಲು ಇವೆ. ಕೃಷಿ ಡಿಪ್ಲೊಮಾ ಮುಗಿಸಿ ನೌಕರಿ ಗಿಟ್ಟಿಸಬಹುದು. ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು. ವ್ಯಾಸಂಗವನ್ನೂ ಮುಂದುವರಿಸಬಹುದು. ಕೃಷಿ ಡಿಪ್ಲೊಮಾ ಪೂರೈಸಿದವರಿಗೆ ಬಿ.ಎಸ್ಸಿ ಅಗ್ರಿ ಪದವಿ ಪ್ರವೇಶದಲ್ಲಿ ಶೇ 5 ರಷ್ಟು ಮೀಸಲು ಇದೆ ಎಂದು ತಿಳಿಸುತ್ತಾರೆ.

ಜಿಲ್ಲೆಯಲ್ಲಿ 2012-13 ರಿಂದ ಕೃಷಿ ಡಿಪ್ಲೊಮಾ ಕೋರ್ಸ್ ಆರಂಭವಾಗಿದೆ. 2020-21ನೇ ಶೈಕ್ಷಣಿಕ ವರ್ಷದವರೆಗೂ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಡಿಪ್ಲೊಮಾ ವಿದ್ಯಾಲಯ ನಡೆಸಲಾಗುತ್ತಿತ್ತು. ಸದ್ಯ ಜನವಾಡದ ಕೃಷಿ ಸಂಶೋಧನಾ ಕೇಂದ್ರದಲ್ಲಿ ವಿದ್ಯಾಲಯ ನಡೆಯುತ್ತಿದೆ. ಬಾಲಕರಿಗೆ ಹಾಸ್ಟೇಲ್ ಸೌಲಭ್ಯವೂ ಇದೆ ಎಂದು ಹೇಳುತ್ತಾರೆ.

ಕೃಷಿ ಡಿಪ್ಲೊಮಾ ಕೋರ್ಸ್ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಗೆ ಮೊಬೈಲ್ ಸಂಖ್ಯೆ 9972146214ಗೆ ಸಂಪರ್ಕಿಸಬಹುದು ಎಂದು ತಿಳಿಸುತ್ತಾರೆ.

ಆರ್.ಎಲ್. ಜಾಧವ್
ಆರ್.ಎಲ್. ಜಾಧವ್
ಅಲ್ಪಾವಧಿಯಲ್ಲೇ ಶಿಕ್ಷಣ ಪೂರೈಸಿ ನೌಕರಿ ಗಿಟ್ಟಿಸ ಬಯಸುವವರಿಗೆ ಕೃಷಿ ಡಿಪ್ಲೊಮಾ ಉತ್ತಮ ಆಯ್ಕೆಯಾಗಿದೆ. ಕೃಷಿಕರ ಮಕ್ಕಳು ಕೋರ್ಸ್ ಅಧ್ಯಯನಕ್ಕೆ ಒಲವು ತೋರಬೇಕು.
–ಆರ್.ಎಲ್. ಜಾಧವ್ ಕೃಷಿ ಡಿಪ್ಲೊಮಾ ವಿದ್ಯಾಲಯದ ಸಂಯೋಜಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT