ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ವಾಯು ಮಾಲಿನ್ಯ ನಿಯಂತ್ರಣಕ್ಕೆ ಜಾಗೃತಿ ಜಾಥಾ

Published 7 ಫೆಬ್ರುವರಿ 2024, 17:02 IST
Last Updated 7 ಫೆಬ್ರುವರಿ 2024, 17:02 IST
ಅಕ್ಷರ ಗಾತ್ರ

ಬೀದರ್‌: ವಾಯುಮಾಲಿನ್ಯ ನಿಯಂತ್ರಣದ ಕುರಿತು ಅರಿವು ಮೂಡಿಸುವ ಜನಜಾಗೃತಿ ಜಾಥಾದ ಎಲ್‌ಇಡಿ ವಾಹನವನ್ನು ನಗರದಲ್ಲಿ ಬುಧವಾರ ಸ್ವಾಗತಿಸಲಾಯಿತು.

ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಚೇರಿಯಿಂದ ಬಂದಿರುವ ಜಾಗೃತಿ ವಾಹನದ ಜಿಲ್ಲಾ ಸಂಚಾರಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಿ. ಶಿರೋಳಕರ ಅವರು ಚಾಲನೆ ನೀಡಿದರು. 

ಬಳಿಕ ವಾಹನವು ನಗರದ ಕೇಂದ್ರ ಬಸ್ ನಿಲ್ದಾಣ, ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಗುಂಪಾ, ಶಿವನಗರ, ನೌಬಾದ್‌ನಲ್ಲಿ ಸಂಚರಿಸಿತು. ವಿಡಿಯೊ ಮೂಲಕ ವಾಯುಮಾಲಿನ್ಯದ ಕುರಿತು ಅರಿವು ಮೂಡಿಸಲಾಯಿತು. 

ಹಿರಿಯ ಮೋಟಾರ್‌ ವಾಹನ ಇನ್‌ಸ್ಪೆಕ್ಟರ್‌ ಶಿವರಾಜ ಜಮಾದಾರ, ಬೀದರ್‌ ಮೋಟಾರ್‌ ವಾಹನ ತರಬೇತಿ ಶಾಲೆಯ ಅಧ್ಯಕ್ಷ ಪ್ರಕಾಶ ಗುಮ್ಮೆ, ಕಾರ್ಯದರ್ಶಿ ರಾಜಕುಮಾರ ಬಿರಾದಾರ, ಸಹ ಕಾರ್ಯದರ್ಶಿ ಸಾಗರ ಉಂಡೆ, ಸುರೇಶ ಗಾಯಕವಾಡ, ಅಹಮ್ಮದ್‌ ಖಾನ್, ಸುಧಾಕರ ಬಿರಾದಾರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT