ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯ ತಡೆ ಜಾಗೃತಿ ಮಾಸಾಚರಣೆ

Last Updated 12 ನವೆಂಬರ್ 2020, 15:28 IST
ಅಕ್ಷರ ಗಾತ್ರ

ಬೀದರ್‌: ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ ‘ಮಾಲಿನ್ಯ ಅಳಿಸಿ ಜೀವ ಉಳಿಸಿ’ ಘೋಷವಾಕ್ಯದಡಿ ವಾಯು ಮಾಲಿನ್ಯ ತಡೆ ಜಾಗೃತಿ ಮಾಸಾಚರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಮಾಸಾಚರಣೆ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಬೀದಿ ನಾಟಕ ಹಾಗೂ ಸಸಿ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ತಮಟೆ ಬಾರಿಸಿ ಚಾಲನೆ ನೀಡಿದರು. ‘ಗಿಡ ನೆಟ್ಟು ಬೆಳೆಸಿರಿ. ನೆಮ್ಮದಿಯ ನಾಳೆಗಾಗಿ ಪರಿಸರದ ಉಳಿವಿಗೆ ಶ್ರಮಿಸಿರಿ’ ಎನ್ನುವ ಸಂದೇಶವನ್ನು ಕಾರ್ಯಕ್ರಮದ ಮೂಲಕ ನೀಡಲಾಯಿತು.

ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಶಿವಶಂಕರ ಮಾತನಾಡಿ, ‘ಮನುಕುಲದ ಒಳಿತಿಗೆ ಪರಿಸರವನ್ನು ಸಮತೋಲನದಿಂದ ಇಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ಕೊಡಬೇಕು’ ಎಂದು ಮನವಿ ಮಾಡಿದರು.

‘ವಾಹನಗಳಿಗೆ ಕಳಪೆ ಇಂಧನ ಬಳಸಬಾರದು. ಇದರಿಂದ ಅಧಿಕ ಹೊಗೆ ಹೊರ ಬಂದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ, ವ್ಯಕ್ತಿಗಳ ಶ್ವಾಸಕೋಶದ ಮೇಲೆ ಹೆಚ್ಚು ದುಷ್ಪರಿಣಾಮ ಉಂಟಾಗುತ್ತದೆ. ಕ್ಯಾನ್ಸರ್, ಅಸ್ಥಮಾ, ದಮ್ಮಿನಂತಹ ಕಾಯಿಲೆಗಳು ಬರುತ್ತವೆ’ ಎಂದು ಎಚ್ಚರಿಸಿದರು.

‘ವಾಹನಗಳಿಗೆ ತಪ್ಪದೇ ಆರು ತಿಂಗಳಿಗೊಮ್ಮೆ ವಾಯು ಮಾಲಿನ್ಯ ಪರೀಕ್ಷೆ ಮಾಡಿಸಬೇಕು. ಇಲ್ಲವಾದರೆ ದ್ವಿಚಕ್ರ ವಾಹನಗಳಿಗೆ ₹1500 ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ₹3 ಸಾವಿರ ದಂಡ ವಿಧಿಸಲಾಗುತ್ತಿದೆ’ ಎಂದು ತಿಳಿಸಿದರು.

ಭಾಲ್ಕಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಎಂ.ಡಿ.ಜಾಫರ್ ಸಾಧಿಕ್ ಮಾತನಾಡಿದರು.
ಕಚೇರಿಯ ಅಧೀಕ್ಷಕ ಖಾಜಾ ಬಿರಾನಿಬಾಷಾ, ಮೋಟಾರ್ ವಾಹನ ನಿರೀಕ್ಷಕ ಮಂಜುನಾಥ ಎಂ., ಬೀದರ್ ಮೋಟಾರ್ ತರಬೇತಿ ಶಾಲೆಯ ಪ್ರಾಚಾರ್ಯ ಶಿವರಾಜ್ ಜಮಾದಾರ, ಪ್ರಕಾಶ ಗುಮ್ಮೆ, ಸಮೀರ್ ಅಹ್ಮದ್, ಅನಿಲಕುಮಾರ, ರಾಜಕುಮಾರ ಬಿರಾದಾರ, ವಿಲಿಯಂ ಹೊಸಮನಿ, ಜೇಮ್ಸ್, ಕಚೇರಿಯ ಸಿಬ್ಬಂದಿ ವಿಶ್ವನಾಥ ಎಂ, ಸಯ್ಯದ್ ಖಲೀಂ, ವೀರೇಂದ್ರ ಇದ್ದರು.

ಬೀದಿನಾಟಕ ಕಾರ್ಯಕ್ರಮ:ಚಿಮಕೋಡದ ನಂದೀಶ್ವರ ನಾಟ್ಯ ಸಂಘದ ಅಧ್ಯಕ್ಷ ದೇವದಾಸ್ ಚಿಮಕೋಡ ನೇತೃತ್ವದ ಬೀದಿನಾಟಕ ಕಲಾ ತಂಡದ ಕಲಾವಿದರು ಬಸವೇಶ್ವರ ವೃತ್ತ, ಹೊಸ ಬಸ್ ನಿಲ್ದಾಣ, ಆರ್‌ಟಿಒ ಕಚೇರಿ ಹತ್ತಿರ ಜಾಗೃತಿ ಕಾರ್ಯಕ್ರಮ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT