ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳ ಪ್ರವೇಶ ದ್ವಾರ ಬಂದ್

Last Updated 27 ಮಾರ್ಚ್ 2020, 9:52 IST
ಅಕ್ಷರ ಗಾತ್ರ

ಬೀದರ್: ಕೊರೊನಾ ಸೋಂಕು ಹರಡುವಿಕೆ ತಡೆಯಲು ಬೀದರ್ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹೊರಗಿನವರು ಪ್ರವೇಶಿಸದಂತೆ ಗ್ರಾಮಸ್ಥರು ಪ್ರವೇಶದ್ವಾರಗಳನ್ನೇ ಬಂದ್‌ ಮಾಡಿದ್ದಾರೆ.

ಆಣದೂರು ಗ್ರಾಮಸ್ಥರು ಗ್ರಾಮದ ಪ್ರವೇಶದಲ್ಲಿದ್ದ ಪೊಲೀಸ್‌ ಬ್ಯಾರಿಕೇಡ್‌ ಹಾಗೂ ಬೊಂಬುಗಳನ್ನು ಬಳಸಿ ರಸ್ತೆ ಬಂದ್‌ ಮಾಡಿದ್ದಾರೆ. ಗ್ರಾಮದಲ್ಲಿನ ಎಲ್ಲ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದ್ದಾರೆ. ಎರಡು ವಾರ ಗ್ರಾಮದೊಳಗೆ ಹೊರಗಿನವರು ಬರದಂತೆ ಎಚ್ಚರ ವಹಿಸಬೇಕು. ಯಾರಾದರೂ ಊರೊಳಗೆ ಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ನಿಜಾಂಪೂರ ಹಾಗೂ ರಾಜಗೀರಾದಲ್ಲೂ ವಾಹನ ಹಾಗೂ ಹೊರಗಿನವರು ಗ್ರಾಮ ಪ್ರವೇಶಿಸದಂತೆ ಮುಳ್ಳು ಹಾಕಿ, ಮುಖ್ಯ ರಸ್ತೆಗಳನ್ನು ಬಂದ್ ಮಾಡಿದ್ದಾರೆ.

ಬೀದರ್‌ ನಗರಸಭೆಯ ವಾರ್ಡ್‌ ಸಂಖ್ಯೆ 31ರ ಹಳ್ಳದಕೇರಿಯಲ್ಲಿ ಜೈಭವಾನಿ ಅಭಿವೃದ್ಧಿ ಮಂಡಳಿ ಸದಸ್ಯರು ಕಾಲೊನಿ ರಸ್ತೆಗೆ ಅಡ್ಡಲಾಗಿ ಕಲ್ಲು ಹಾಗೂ ಮುಳ್ಳುಗಳನ್ನು ಇಟ್ಟು ಹೊರಗಿನವರು ಕಾಲೊನಿಯೊಳಗೆ ಬರದಂತೆ ಮಾಡಿದ್ದಾರೆ.

ಬಸವಕಲ್ಯಾಣ, ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್ ತಾಲ್ಲೂಕಿನ ಕಮಠಾಣದಲ್ಲಿ ಔಷಧ ಅಂಗಡಿ ಹಾಗೂ ನ್ಯಾಯಬೆಲೆ ಅಂಗಡಿಗಳ ಮುಂದೆ ಕನಿಷ್ಠ ಒಂದು ಮೀಟರ್‌ ಅಂತರದಲ್ಲಿ ಒಂದು ಮಾರ್ಕ್‌ ಮಾಡಲಾಗಿದೆ. ಜನರು ಅದರಲ್ಲೇ ಸರತಿ ಸಾಲಿನಲ್ಲಿ ನಿಂತು ದಿನಸಿ, ತರಕಾರಿ ಮತ್ತು ಔಷಧಿ ಖರೀದಿಸಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಜಿಲ್ಲೆಯ ಗಡಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT