ಮಂಗಳವಾರ, ಏಪ್ರಿಲ್ 20, 2021
31 °C

ಬೀದರ್: ಆಸ್ಪತ್ರೆಗೆ ಆಂಬುಲನ್ಸ್ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬೆಂಗಳೂರಿನ ರಾಜಸ್ಥಾನ್ ಸಂಘ ಕರ್ನಾಟಕ ಸ್ವಯಂ ಸೇವಾ ಸಂಸ್ಥೆಯು ಬಸವಕಲ್ಯಾಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಶ್ರದ್ಧಾಂಜಲಿ ಆಂಬುಲನ್ಸ್ ಕೊಡುಗೆಯಾಗಿ ನೀಡಿದೆ.

ಸಂಸ್ಥೆಯ ಅಧ್ಯಕ್ಷೆ ರತ್ನಿಬಾಯಿ ಮೆಹ್ತಾ, ಮುಖ್ಯಸ್ಥ ಅಶೋಕ ಚೋಪ್ರಾ ಹಾಗೂ ಸಂಯೋಜಕ ಬಸವರಾಜ ಬುಳ್ಳಾ ಅವರು ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಅವರಿಗೆ ಆಂಬುಲನ್ಸ್ ಹಸ್ತಾಂತರಿಸಿದರು.

ಶವ ಸಾಗಣೆಗೆ ನೆರವಾಗಲು ಬಸವಕಲ್ಯಾಣ ಸಾರ್ವಜನಿಕ ಆಸ್ಪತ್ರೆಗೆ ₹25 ಲಕ್ಷ ಮೌಲ್ಯದ ಆಂಬುಲನ್ಸ್ ಕೊಡಲಾಗಿದ್ದು, ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಸೇವೆ ಒದಗಿಸಲಿದೆ ಎಂದು ಬಸವರಾಜ ಬುಳ್ಳಾ ತಿಳಿಸಿದರು.

ರಾಜಸ್ಥಾನ್ ಸಂಘ ಕರ್ನಾಟಕವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದೆ. ಹಲವಾರು ಜನಪರ ಕಾರ್ಯಗಳನ್ನು ಕೈಗೊಂಡಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.