ಮಾಮನಕೇರಿ(ಜನವಾಡ): ಬೀದರ್ ತಾಲ್ಲೂಕಿನ ಮಾಮನಕೇರಿ ಸಮೀಪದ ಜ್ಞಾನಸುಧಾ ವಿದ್ಯಾಲಯದಲ್ಲಿ ಶನಿವಾರ ನಡೆದ ಜಿಎಸ್ವಿ ಸರಿಗಮಪ ಸಂಗೀತ ಸ್ಪರ್ಧೆಯ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಅನನ್ಯ ರಂಜೀತ್ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಯುಕ್ತಿ ಗೌತಮ ಅರಳಿ ಪ್ರಥಮ ಸ್ಥಾನ ಗಳಿಸಿದರು.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸನ್ನಿಧಿ ಆಕಾಶ್ ಪಾಟೀಲ ದ್ವಿತೀಯ, ಆಧ್ಯಾ ರಿತೇಶ್ ತೃತೀಯ ಸ್ಥಾನ ಗಳಿಸಿದರೆ, ಪ್ರೌಢಶಾಲೆ ವಿಭಾಗದಲ್ಲಿ ಚಿನ್ಮಯಿ ಅಲ್ಲಮಪ್ರಭು ದ್ವಿತೀಯ ಮತ್ತು ಸುಶ್ಮಿತಾ ಸುರೇಶ್ ತೃತೀಯ ಸ್ಥಾನ ಪಡೆದರು.

ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಸುಮಧುರವಾಗಿ ಹಾಡಿ ಎಲ್ಲರ ಮನ ಗೆದ್ದರು.
‘ಹುಟ್ಟೋದ್ಯಾಕೆ ಸಾಯೋದ್ಯಾಕೆ ಏನಾದರು ಸಾಧಿಸಿ ಹೋಗೋಕೆ;, ‘ಕರುನಾಡತಾಯಿ ಸದಾ ಚಿನ್ಮಯಿ, ಈ ಪುಣ್ಯ ಭೂಮಿ ನಮ್ಮ ದೇವಾಲಯ’, ‘ದಿಲ್ ದಿಯಾ ಹೈ ಜಾನ್ ಭಿ ದೆಂಗೆ...’ ಗೀತೆಗಳನ್ನು 50ಕ್ಕೂ ಅಧಿಕ ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಾಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ಮಾನಸಿಕ ಒತ್ತಡ ನಿವಾರಣೆಗೆ ಸಂಗೀತ ಹಾಗೂ ಯೋಗ ಸಹಕಾರಿಯಾಗಿವೆ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಹೇಳಿದರು.

ವಿದ್ಯಾರ್ಥಿಗಳ ಸಂಗೀತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಎಂಟು ವರ್ಷಗಳಿಂದ ಸ್ಪರ್ಧೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಮುನೇಶ್ವರ ಲಾಖಾ ತಿಳಿಸಿದರು.

ಹುಬ್ಬಳ್ಳಿಯ ಗಾಯಕ ಸುಧೀಂದ್ರ ವಿ. ಪದಕಿ, ಹುಮನಾಬಾದ್ನ ಸುಗೌಂಕರ್ ಅಜಯ ಪಂಡಿತರಾವ್ ತೀರ್ಪುಗಾರರಾಗಿದ್ದರು. ಪೂಜಾ ಜಾರ್ಜ್ ಸ್ಯಾಮುವೆಲ್, ಪ್ರಾಚಾರ್ಯೆ ಸುನೀತಾ ಸ್ವಾಮಿ, ಉಪ ಪ್ರಾಚಾರ್ಯೆ ಕಲ್ಪನಾ ಮೋದಿ, ಮೇಲ್ವಿಚಾರಕಿ ರಜನಿ ಮೈಲೂರಕರ್, ಸಾಯಿಗೀತಾ ಪಾಟೀಲ ಇದ್ದರು.

ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.