ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದರೂ ಹೇಳಬೇಕೆಂದರೆ ಎದೆ ಢವ ಢವ ಅನ್ನುತ್ತಿದೆ: ನಿಜಗುಣಾನಂದ ಸ್ವಾಮೀಜಿ ಆತಂಕ

ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಎರಡನೇ ದಿನದ ಅನುಭವ ಮಂಟಪ ಮತ್ತು ಮಹಿಳಾ ಮೀಸಲಾತಿ ಗೋಷ್ಠಿಯಲ್ಲಿ ಹೇಳಿಕೆ
Published 26 ನವೆಂಬರ್ 2023, 16:15 IST
Last Updated 27 ನವೆಂಬರ್ 2023, 2:54 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್‌): ‘ಬಸವಣ್ಣನವರ ವೈಚಾರಿಕತೆ ಹೇಳುವವರ ಬಾಯಿಗೆ ಬೀಗ ಹಾಕುವ ಹುನ್ನಾರ ನಡೆಯುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಂತಾಗಿದೆ. ಹೀಗಾಗಿ ಏನಾದರೂ ಹೇಳಬೇಕೆಂದರೆ ಎದೆ ಢವ ಢವ ಅನ್ನುತ್ತಿದೆ’ ಎಂದು ಬೈಲೂರು ನಿಜಗುಣಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಎರಡನೇ ದಿನದ ಅನುಭವ ಮಂಟಪ ಮತ್ತು ಮಹಿಳಾ ಮೀಸಲಾತಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಲಿಂಗಾಯತರಲ್ಲಿ ಗಣೇಶನ ಪೂಜೆ ಇಲ್ಲ ಎಂದಿದ್ದಕ್ಕೆ ವಿರೋಧಿಸುತ್ತಿದ್ದಾರೆ. ನಾನು ಸಹ ತಪ್ಪು ಹೇಳದಿದ್ದರೂ ಕೊಲೆ ಬೆದರಿಕೆ ಹಾಕಿದ್ದಾರೆ. ಎಂ.ಎಂ.ಕಲಬುರ್ಗಿಯವರು ಕಲ್ಲು ದೇವರಲ್ಲ ಎಂದಿದ್ದಕ್ಕೆ ಅವರನ್ನು ಕೊಲೆ ಮಾಡಲಾಯಿತು. ಈಗಲೇ ಇಂಥ ಪರಿಸ್ಥಿತಿ ಇದೆ ಎಂದಾಗ 12ನೇ ಶತಮಾನದಲ್ಲಿ ಬಸವಣ್ಣನವರು ಎಷ್ಟು ಚಿತ್ರಹಿಂಸೆ ಅನುಭವಿಸಿರಬೇಕು’ ಎಂದರು.

‘ಬಸವತತ್ವಕ್ಕೆ ಲಿಂಗಾಯತರಲ್ಲಿನ ವೀರಶೈವ ಮನಸ್ಸಿನ ಮನುವಾದಿಗಳು ವಿರೋಧಿಸುತ್ತಿದ್ದಾರೆ. ಅನ್ಯರಿಂದ ಸಮಸ್ಯೆ ಆಗಿಲ್ಲ. ಅನೇಕರು ನನ್ನನ್ನು ಬೈಯುತ್ತಾರೆ. ನನಗೆ ಬೈಯಿರಿ. ಆದರೆ ಬಸವಣ್ಣನವರ ಬಗ್ಗೆ ಏನಾದರೂ ಅಂದರೆ ಸುಮ್ಮನೆ ಕೂಡಲಾರೆ ಎಂದು ಎಚ್ಚರಿಕೆ ಕೊಟ್ಟಿದ್ದೇನೆ’ ಎಂದರು.

ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಶಾಸಕ ಶರಣು ಸಲಗರ, ಪ್ರೊ.ಶಿವಗಂಗಾ ರುಮ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT