ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ನೇಮಕಾತಿ ರ‍್ಯಾಲಿ 3,853 ಅಭ್ಯರ್ಥಿಗಳು ಭಾಗಿ

Last Updated 8 ಡಿಸೆಂಬರ್ 2022, 13:47 IST
ಅಕ್ಷರ ಗಾತ್ರ

ಬೀದರ್: ಬೆಳಗಾವಿಯ ಸೇನಾ ನೇಮಕಾತಿ ವಿಭಾಗದವರು ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ನಾಲ್ಕನೆಯ ದಿನವಾದ ಗುರುವಾರ ಅಗ್ನಿ ಪಥನ್ ಅಗ್ನಿ ವೀರರಿಗಾಗಿ ನಡೆಸಿದ ಸೇನಾ ನೇಮಕಾತಿ ರ‍್ಯಾಲಿಯಲ್ಲಿ 3,853 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾದರು.

ಬೆಳಗಾವಿ ಜಿಲ್ಲೆಯ ಪರಸಗಡ ತಾಲ್ಲೂಕು, ಯಾದಗಿರಿ, ಯಾದಗಿರಿ ಜಿಲ್ಲೆಯ ಶಹಾಪುರ ಹಾಗೂ ಸುರಪುರ ತಾಲ್ಲೂಕಿನ ಯುವಕರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಬುಧವಾರ ಸಂಜೆಯೇ ಅಧಿಕ ಸಂಖ್ಯೆಯಲ್ಲಿ ಬಂದಿದ್ದ ಯುವಕರು ನಗರದ ಲಾಡ್ಜ್‌ಗಳಲ್ಲಿ ತಂಗಿದ್ದರು. ಕೆಲ ಯುವಕರು ಸಾಯಿ ಆದರ್ಶ ಶಾಲೆಯ ಆವರಣ, ಮೈದಾನ, ಬಸ್‌ ತಂಗು ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಡಿಎಆರ್‌ ತುಕ್ಕಡಿಯನ್ನು ನಿಯೋಜಿಸಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದರು. ಸಂಚಾರ ಮಾರ್ಗಗಳನ್ನು ಬದಲಿಸಲಾಗಿತ್ತು.

ಡಿ.9 ರಂದು ಬೆಳಗಾವಿ ಜಿಲ್ಲೆಯ ಪರಸಗಡ, ಖಾನಾಪುರ, 10ರಂದು ಸಂಪಗಾಂವ, 11 ರಂದು ಸಂಪಗಾಂವ, ಹುಕ್ಕೇರಿ ಹಾಗೂ ರಾಮದುರ್ಗ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT