ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಕಾಸ್ತ್ರಗಳನ್ನು ಹಿಡಿದು ಕುಣಿತ: ಆರೋಪಿಗಳ ಬಂಧನ , 4 ಗನ್, ತಲವಾರ ವಶಕ್ಕೆ

Last Updated 7 ಏಪ್ರಿಲ್ 2023, 8:18 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್ ಜಿಲ್ಲೆ): ತಾಲ್ಲೂಕಿನ ಮಂಠಾಳ ಠಾಣೆ ಸಿಪಿಐ ವಿಜಯಕುಮಾರ ನೇತೃತ್ವದಲ್ಲಿ ಬುಧವಾರ ಗ್ರಾಮದ ಹೊರ ವಲಯದ ಕಾಂಬಳೆವಾಡಿ ಕ್ರಾಸ್ ಹತ್ತಿರದಲ್ಲಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಕುಣಿಯುತ್ತಿದ್ದ ಯುವಕರನ್ನು ಬಂಧಿಸಲಾಗಿದೆ.

ಆರೋಪಿಗಳಾದ ವೀರಣ್ಣ ಸಿದ್ದಣ್ಣ, ತಿಪ್ಪಣ್ಣ ಶಂಕರ, ವಿನೋದರೆಡ್ಡಿ, ಆಕಾಶ ಸುಭಾಷ ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರಿಂದ ಒಂದು ಗನ್, ಒಂದು ತಲವಾರ, ಎರಡು ಚಾಕು ಹಾಗೂ ಮೂರು ಮೊಬೈಲ್ ಮತ್ತು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಠಾಣೆ ಸಿಬ್ಬಂದಿ ಬಲವಂತರೆಡ್ಡಿ, ಅನಿಲ, ಪ್ರಕಾಶ, ಪರಶುರಾಮರೆಡ್ಡಿ, ತಾತೇರಾವ್ ಅವರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ.

ಅದೇ ರೀತಿ ಗುರುವಾರ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ವಿನೋದು ಶಾಂತಪ್ಪ ಮತ್ತು ಸುಭ್ಹಾನ್ ಅಬ್ದುಲ್ ಗಫೂರ ಇವರನ್ನು ಬಂಧಿಸಿ ಅವರಿಂದ ಮೂರು ಪಾಲ್ಲೇಟ್ ಗನ್, 22 ಪೆಲ್ಲೇಟ್ ಬಾಕ್ಸ್, 4 ಪಂಚ್, ಒಂದು ಹ್ಯಾಂಡ್ ರಾಡ್ ಜಪ್ತಿ ಮಾಡಿಕೊಂಡು ಇವರನ್ನು ಸಹ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT