ಸೋಮವಾರ, ಆಗಸ್ಟ್ 15, 2022
27 °C

ಕಲೆ, ಸಂಸ್ಕೃತಿ ಉಳಿಸುವ ಹೊಣೆ ಕಲಾವಿದರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಶಿಸಿ ಹೋಗುತ್ತಿರುವ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬ ಕಲಾವಿದರು ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಸೋನಾರೆ ಹೇಳಿದರು.

ತಾಲ್ಲೂಕಿನ ಸುಲ್ತಾನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಘಾಟಬೋರಾಳ ಗ್ರಾಮದ ಕೀರ್ತಿ ಎನ್.ಜಿ.ಒ ಎಜುಕೇಷನ್ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ಸಾಂಸ್ಕೃತಿಕ ಗಡಿನಾಡು ಉತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂಟರ್‌ನೆಟ್‌ನ ಅತಿಯಾದ ಪ್ರಭಾವದಿಂದ ನಾಡಿನ ಕಲೆ ಕಣ್ಮರೆಯಾಗದಿರಲಿ ಎನ್ನುವ ಉದ್ದೇಶದಿಂದ ನಗರ ಪ್ರದೇಶಗಳಲ್ಲಿ ಮದುವೆ ಇತ್ಯಾದಿ ಸಾಮಾಜಿಕ ಕಾರ್ಯಕ್ರಮಗಳಿಗೆ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಕರೆಸಿ ಹಾಡಿಸಲಾಗುತ್ತದೆ ಎಂದು ಹೇಳಿದರು.

ಮಲ್ಕಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಂಟೆಪ್ಪ, ಪಂಚಾಯಿತಿ ಉಪಾಧ್ಯಕ್ಷ ಸ್ಟಿವನ್, ಕೀರ್ತಿ ಎನ್.ಜಿ.ಒ ಎಜುಕೇಷನ್ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಅಷ್ಟೂರೆ, ಮಲ್ಕಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಸಂತೋಷ ಮಲ್ಕಾಪೂರೆ, ಸದಸ್ಯರಾದ ಶಿವಕುಮಾರ, ಸಾಹಿತಿ ರಮೇಶ ಬಿರಾದಾರ ಮಾತನಾಡಿದರು.

ಸುಲ್ತಾನಪುರದ ಕಲಾವತಿ, ರಾಣಿ ಮತ್ತು ಶ್ರುತಿ ಭೂಲಾಯಿ ಹಾಡು ಹಾಡಿದರು. ಪಂಚಾಯಿತಿ ಸದಸ್ಯರಾದ ಮುತ್ತಾಯ, ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಮುಖ್ಯ ಶಿಕ್ಷಕಿ ಸುದೇವಿ, ಸಹ ಶಿಕ್ಷಕಿಯರಾದ ರಾಜಲಕ್ಷ್ಮಿ ಪಾಟೀಲ, ಪ್ರಿಯಾ ಸಜ್ಜನಶೆಟ್ಟಿ, ಸುಜಾತಾ ನಿನ್ನೆಕರ್, ಶೇಷರಾವ್ ಮೇತ್ರೆ ಇದ್ದರು.

ನಾಗಶೆಟ್ಟಿ ಧರಮಪೂರ ಸ್ವಾಗತಿಸಿದರು. ಚಂದ್ರಕಾಂತ ಹಳ್ಳಿಖೇಡಕರ್ ವಂದಿಸಿದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.