ಔರಾದ್: ತಾಲ್ಲೂಕಿನಲ್ಲಿ ಒಂದು ವರ್ಷದಲ್ಲಿ 50 ಸಾವಿರ ಸಸಿ ನೆಡಲಾಗುವುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಭೀಮಸೇನರಾವ್ ಸಿಂಧೆ ಹೇಳಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ತಮ್ಮ ಜನ್ಮದಿನದ ಅಂಗವಾಗಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು. ಸರ್ಕಾರ ಪರಿಸರ ರಕ್ಷಣೆಗೆ ಒತ್ತು ನೀಡಿದ್ದು, ಪ್ರತಿ ತಾಲ್ಲೂಕಿನಲ್ಲಿ ಈ ರೀತಿಯ ಪರಿಸರ ರಕ್ಷಣೆ ಕೆಲಸ ಮಾಡಲಾಗುತ್ತಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಅಭಿಯಾನಕ್ಕೆ ಕೈಜೋಡಿಸಬೇಕು. ಹಚ್ಚಿದ ಸಸಿಗಳನ್ನು ಪೋಷಣೆ ಮಾಡುವುದು ಮುಖ್ಯ ಎಂದರು.

ಇದೇ ವೇಳೆ ಪಟ್ಟಣದ ಸರ್ಕಾರಿ ಶಾಲೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಕ್ಕಳಿಗೆ 10 ಸಾವಿರ ನೋಟ್ ಬುಕ್ ವಿತರಿಸಿದರು. ಅಲೆಮಾರಿ ಮಹಿಳೆಯರಿಗೆ ಸೀರೆ, ವೃದ್ಧಾಶ್ರಮದ ಹಿರಿಯರಿಗೆ ಬಟ್ಟೆ ವಿತರಿಸಲಾಯಿತು.

ತಾಪಂ ಮಾಜಿ ಅಧ್ಯಕ್ಷ ನೆಹರು ಪಾಟೀಲ್, ಅಮರ ಜಾಧವ್, ಶಿವರಾಜ ದೇಶಮುಖ, ರಾಮಣ್ಣ ವಡಿಯಾರ್, ಚನ್ನಪ್ಪ ಉಪ್ಪೆ, ಸುನಿಲಕುಮಾರ ದೇಶಮುಖ, ಸುಧಾಕಾರ ಕೊಳ್ಳೂರ್, ದತ್ತಾತ್ರಿ ಬಾಪೂರೆ, ಹರಿದೇವ, ಪ್ರಕಾಶ ಶಿಂಧೆ, ಶಾಮಣ್ಣ ಉಜನಿ, ವಿಷ್ಣು ಖಂಡೆ, ಫಜಾಜ್ ಅಲೀ, ಚಂದ್ರಶೇಖರ್ ಪಾಟೀಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.